Monday, July 4, 2022

Latest Posts

ಪ್ರಮುಖ ಆಟಗಾರ ಇಲ್ಲದಿದ್ದರೂ ಆಸೀಸ್ ವಿರುದ್ಧ ಗೆದ್ದ ಭಾರತ

ಹೊಸ ದಿಗಂತ ಆನ್ ಲೈನ್ ಡೆಸ್ಕ್

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ವಿಶೇಷ ದಾಖಲೆ ಬರೆದಿದೆ. ಆತಿಥೇಯರ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಜಯ ದಾಖಲಿಸಿ ಭಾರತ ಈ ವಿಶೇಷ ದಾಖಲೆ ನಿರ್ಮಿಸಿದೆ. ಐದು ಮಂದಿ ಪ್ರಮುಖ ಆಟಗಾರರು ಇಲ್ಲದೆಯೂ ಭಾರತ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯ ಗೆದ್ದ ಹಿರಿಮೆಗೆ ಪಾತ್ರವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 195 ರನ್ ಹಾಗೂ ಎರಡನೇಯ ಇನ್ನಿಂಗ್ಸ್‌ನಲ್ಲಿ 200 ರನ್ ಗಳಿಸಿತ್ತು. ಪ್ರತಿಯಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 326 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 70 ರನ್ ಗಳಿಸಿ ಜಯ ಸಂಪಾದಿಸಿದೆ.
ವಿಶೇಷ ಎಂದರೆ ಎರಡನೇಯ ಪಂದ್ಯ ಆಡಿದ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇಶಾಂತ್ ಶರ್ಮಾ, ಮಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಇರಲಿಲ್ಲ. ಪ್ರಮುಖ ಆಟಗಾರರಿಲ್ಲದೆಯೂ ಭಾರತ ಪಂದ್ಯ ಗೆದ್ದಿದೆ.
ಕೊಹ್ಲಿ ಪಿತೃತ್ವ ರಜೆ ಪಡೆದುಕೊಂಡಿದ್ದಾರೆ. ಗಾಯಗೊಂಡಿದ್ದ ರೋಹಿತ್ ಶರ್ಮಾ ಇನ್ನಷ್ಟೇ ಟೆಸ್ಟ್ ತಂಡ ಸೇರಬೇಕಿದೆ. ವೇಗದ ಬೌಲರ್ ಮಹಮ್ಮದ್ ಶಮಿ ವಿಶ್ರಾಂತಿಯಲ್ಲಿದ್ದರೆ. ಇಶಾಂತ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss