ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೆಪ್ಟೆಂಬರ್ 22 ರಿಂದ ಮಹಾರಾಷ್ಟ್ರಕ್ಕೆ ಬಸ್ ಸೇವೆ ಪುನರಾರಂಭಿಸುವುದಾಗಿ ಶುಕ್ರವಾರ ತಿಳಿಸಿದ್ದು, ಬೆಂಗಳೂರು, ದಾವಣಗೆರೆ, ಮಂಗಳೂರು ಮತ್ತು ಕರ್ನಾಟಕದ ಇತರ ಸ್ಥಳಗಳಿಂದ ಸೇವೆಗಳನ್ನ ನಿರ್ವಹಿಸಲಾಗುವುದು ಎಂದು ಹೇಳಿದೆ.
ಕೊರೋನಾ ಲಾಕ್ ಡೌನ್ ನಿಂದ ಸುಮಾರು ಆರು ತಿಂಗಳ ಕಾಲ ಅಂತಾರಾಜ್ಯ ಬಸ್ ಸೇವೆಗಳನ್ನು ನಿಲ್ಲಿಸಿದ್ದ ರಾಜ್ಯ, ಈ ತಿಂಗಳ ಆರಂಭದಲ್ಲಿ ಗೋವಾ ಮತ್ತು ಆಂಧ್ರಪ್ರದೇಶಕ್ಕೆ ಸೇವೆಗಳನ್ನ ಪುನರಾರಂಭಿಸಿತ್ತು. ಸದ್ಯ ಸೆಪ್ಟಂಬರ್ 22ರಿಂದ ಮಹಾರಾಷ್ಟ್ರಕ್ಕೆ ಬಸ್ ಸೇವೆಗಳು ಪ್ರಾರಂಭವಾಗಲಿವೆ.