spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ರಯಾಣಿಕ ವಾಹನಗಳಿಗೆ ಬೇಡಿಕೆ ಗಣನೀಯ ಚೇತರಿಕೆ: ಹೊಸ ನಿರೀಕ್ಷೆಯಲ್ಲಿ ಉದ್ಯಮರಂಗ!

- Advertisement -Nitte

ದಿಲ್ಲಿ: ದೇಶೀ ಮಾರುಕಟ್ಟೆಯಲ್ಲಿ ಕೋವಿಡ್-೧೯ರ ಕಾರಣದಿಂದಾಗಿ ಭಾರೀ ಕುಸಿತ ಕಂಡಿದ್ದ ಬೈಕ್ ,ತ್ರಿಚಕ್ರ ವಾಹನ ಸಹಿತ ಪ್ರಯಾಣಿಕ ವಾಹನಗಳ ಬೇಡಿಕೆಯಲ್ಲಿ ಇದೀಗ ಗಣನೀಯ ಚೇತರಿಕೆ ಕಂಡುಬಂದಿದೆ. ಜುಲೈಯಲ್ಲಿ ಇವುಗಳ ಮಾರಾಟದಲ್ಲಿ ಶೇ.೩.೮೬ ಮಾತ್ರ ಕುಸಿತ ಕಂಡುಬಂದಿದೆ. ಪ್ರಯಾಣಿಕ ವಾಹನಗಳ ಮಾರಾಟವು ೧,೮೨,೭೭೯ಯುನಿಟ್‌ಗಳಿಗೆ ಇಳಿಕೆಯಾಗಿದ್ದು,  ಕಳೆದ ವರ್ಷ ಜುಲೈಯಲ್ಲಿ ಈ ಪ್ರಮಾಣವು ೧,೯೦,೧೧೫ಯುನಿಟ್‌ಗಳಷ್ಟಿತ್ತು. ಆದರೆ ಈ ಮಳೆಗಾಲದಲ್ಲಿ ಕೋವಿಡ್-೧೯ರ ನಡುವೆಯೂ ಇಷ್ಟು ಮಾರಾಟವಾಗಿರುವುದು ಉದ್ಯಮ ರಂಗದಲ್ಲಿ ಹೊಸ ನಿರೀಕ್ಷೆ ಮತ್ತು ಭರವಸೆಗಳನ್ನು ಮೂಡಿಸಿದೆ.
ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಮಾತ್ರ ಶೇ.೭೭.೧೬ಕುಸಿತವಾಗಿದೆ. ೨೦೧೯ ಜುಲೈನಲ್ಲಿ ೫೫,೭೧೯ರಷ್ಟಿದ್ದ ಮಾರಾಟ ಪ್ರಮಾಣ ೨೦೨೦ರ ಜುಲೈಗೆ ೧೨,೭೨೮ಯುನಿಟ್‌ಗೆ ಕುಸಿದಿದೆ ಎಂದು ಸಿಯಾಮ್ ಅಂಕಿಅಂಶ ಮಾಹಿತಿ ನೀಡಿದೆ.
ಆದಾಗ್ಯೂ ೨೦೨೦ರ ಜುಲೈನಲ್ಲಿ ೧೨,೮೧,೩೫೪ ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ೨೦೧೯ರ ಜುಲೈನಲ್ಲಿ ಈ ಪ್ರಮಾಣ ೧೫,೧೧,೭೧೭ರಷ್ಟಿತ್ತು. ಅಂದರೆ ಈ ಬಾರಿ ಮಾರಾಟ ಪ್ರಮಾಣದಲ್ಲಿ ಶೇ.೧೫.೨೪ ಇಳಿಕೆಯಾಗಿದ್ದು, ಈ ಬಿಕ್ಕಟ್ಟಿನ ಸಮಯದಲ್ಲೂ ಇಷ್ಟು ಯುನಿಟ್‌ಗಳು ಮಾರಾಟವಾಗಿರುವುದು ಭರವಸೆ ತರುವಂಥದ್ದೆಂಬುದಾಗಿ ಮೂಲಗಳು ತಿಳಿಸಿವೆ.
ಕಳೆದ ಕೆಲವು ತಿಂಗಳುಗಳಿಗಿಂತ ಜುಲೈ ತಿಂಗಳಲ್ಲಿ ವಾಹನ ವಹಿವಾಟು ಗಣನೀಯವಾಗಿ ಚೇತರಿಸಿಕೊಂಡಿರುವುದು ಸಮಾಧಾನಕರ ಅಂಶ.ಹಲವು ವಾಹನ ಮಾರಾಟ ಕಂಪೆನಿಗಳಿಗೆ ಕಳೆದ ಕೆಲವು ತಿಂಗಳಲ್ಲಿ ಉತ್ತಮ ವಹಿವಾಟಾಗಿರುವುದು ಕೂಡ ಗಮನಾರ್ಹ. ಇದು ಕಂಪೆನಿಗಳಿಗೆ ಮರಳಿ ಆತ್ಮವಿಶ್ವಾಸ ತುಂಬುವ ಬೆಳವಣಿಗೆಯಾಗಿದೆ ಎಂದು ಸಿಯಾಮ್ ಮಹಾ ನಿರ್ದೇಶಕ ರಾಜೇಶ್ ಮೆನನ್ ತಿಳಿಸಿದ್ದಾರೆ.
ಪ್ರಯಾಣಿಕ ವಾಹನಗಳಿಗೆ ಮುಖ್ಯವಾಗಿ ದ್ವಿಚಕ್ರ ವಾಹನಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಕುಸಿಯುತ್ತಿದೆ. ಆದರೂ ಕೊರೋನಾ ಕಾಟದ ಕಳೆದ ಕೆಲವು ತಿಂಗಳ ವಹಿವಾಟಿನೊಂದಿಗೆ ಹೋಲಿಸಿದಾಗ, ಜುಲೈಯಲ್ಲಿ ಇಂತಹ ಸನ್ನಿವೇಶ ಕಂಡುಬಂದಿಲ್ಲ. ಆದರೂ ಗ್ರಾಹಕರ ಪ್ರಸ್ತುತ ಬೇಡಿಕೆ ಕೂಡ ಶಾಶ್ವತವೋ ಅಥವಾ ತಾತ್ಪೂರ್ತಿಕವೋ ಎಂಬುದು ಆಗಸ್ಟ್ ತಿಂಗಳಲ್ಲಿನ ಪ್ರಯಾಣಿಕ ವಾಹನ ಮಾರಾಟ ಪ್ರಮಾಣದಿಂದ ಸಾಬೀತಾಗಲಿದೆ ಎಂದು ಸಿಯಾಮ್ ಅಧ್ಯಕ್ಷ ರಾಜನ್ ವಧೇರಾ ಅಭಿಪ್ರಾಯಪಡುತ್ತಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss