Thursday, August 18, 2022

Latest Posts

ಪ್ರವಾಹಕ್ಕೆ ನಲುಗಿ ಹೋಗಿರುವ ವಾಸರಕುದ್ರಿಗೆ ಹೊಸಕಂಬಿ-ಅಚವೆ ಮತ್ತಿತರ ಪ್ರದೇಶಗಳಿಗೆ ಶಾಸಕಿ ರೂಪಾಲಿ ಭೇಟಿ, ಪರಿಶೀಲನೆ

ಅಂಕೋಲಾ : ವ್ಯಾಪಕ ಮಳೆಗೆ ಗಂಗಾವಳಿ ನದಿಯಲ್ಲಿ ಉಂಟಾದ ಪ್ರವಾಹಕ್ಕೆ ನಲುಗಿ ಹೋಗಿರುವ ತಾಲೂಕಿನ ವಾಸರಕುದ್ರಿಗೆ ಹೊಸಕಂಬಿ-ಅಚವೆ ಮತ್ತಿತರ ಪ್ರದೇಶಗಳಿಗೆ ಶಾಸಕಿ ರೂಪಾಲಿ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ , ಪರಿಹಾರ ಕಾರ್ಯಕ್ಕೆ ವೇಗ ನೀಡಿದರು.
ತಾಲೂಕಿನ ಹೊಸಕಂಬಿ-ಅಚವೆ ರಸ್ತೆ ಹಾಗೂ ಹೊಸಕಂಬಿ- ತೊಗಸೆ ಎಸ್ಸಿಕೇರಿ ರಸ್ತೆಯು ಗಂಗಾವಳಿ ನದಿ ನೀರಿನ ಪ್ರವಾಹದಿಂದ ಮುಳುಗಡೆಯಾಗಿದ್ದು ಜನರ ಸ್ಥಳಾಂತರಕ್ಕೆ ಅನುಕೂಲವಾಗುವಂತೆ ದೋಣಿಯ ವ್ಯವಸ್ಥೆ ಮಾಡಲಾಯಿತು.
ನದಿ ನೀರಿನ ಪ್ರಮಾಣ ಅಪಾಯದ ಮಟ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರವನ್ನು ನಿಲ್ಲಿಸಲು , ದೋಣಿಯಲ್ಲಿ ಲೈಫ್ ಜ್ಯಾಕೆಟ್ ಧರಿಸಿ
ಸ್ಥಳೀಯ ಮೀನುಗಾರರ ನೆರವು ಪಡೆದು ಜನರನ್ನು ಸ್ಥಳಾಂತರಿಸಲು ಶಾಸಕರು ಸೂಚನೆ ನೀಡಿದರು.
ವಾಸರಕುದ್ರಗಿ ಪಂಚಾಯ್ತಿ ವ್ಯಾಪ್ತಿಯ ಕೊಡ್ಸಾಣಿ-ಶಿರಗುಂಜಿ ರಸ್ತೆಯು ನೆರೆ ಪ್ರವಾಹದಿಂದ ಸಂಪರ್ಕ ಕಡಿತಗೊಂಡಿದ್ದು, ನಡುಗಡ್ಡೆಯಂತಾದ ಗ್ರಾಮಗಳಿಗೆ ಈ ಭಾಗದಲ್ಲಿ ಜನರ ಅನುಕೂಲಕ್ಕೆ ದೋಣಿಗಳ ವ್ಯವಸ್ಥೆ ಮಾಡಲಾಗಿದೆ.
ತಹಶೀಲ್ದಾರ ಉದಯ ಕುಂಬಾರ ತಾ.ಪಂ. ಇಒ ಪುರುಶೋತ್ತಮ ಸಾವಂತ್ ಪಿಡಿಒ, ಸ್ಥಳೀಯ ಮುಖಂಡರು ಜೊತೆಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!