ಬಾಗಲಕೋಟೆ: ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತವು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಒಂದು ವೇಳೆ ಪ್ರವಾಹ ಪರಿಸ್ಥಿತಿ ಉಂಟಾದರೆ ಎದುರಿಸಲು ಸನ್ನದ್ಧ ವಾಗಿದೆ ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಗಳ ಕಚೇರಿಯಲ್ಲಿಂದು ಪ್ರವಾಹ ಪರಿಸ್ಥಿತಿ ಮತ್ತು ಕೋವಿಡ್ 19 ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರವಾಹದಿಂದ ಬಾದಿತ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು,
-ಮಹಾರಾಷ್ಟ್ರ ರಾಜ್ಯದ ಕೊಂಕಣ ಪ್ರದೇಶದಲ್ಲಿ ಹೆಚ್ಚು ಮಳೆ ಆಗುತ್ತಿರುವ ಪರಿಣಾಮ ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣಾ ಹಾಗೂ ಘಟಪ್ರಭಾ ನದಿಗಳಲ್ಲಿ ಹೆಚ್ಚು ನೀರು ಹರಿದು ಬರುತ್ತಿರುವ ಹಿನ್ನಲೆ ಪ್ರವಾಹ ಭೀತಿ ಉಂಟಾಗಲಿದೆ .
ಪ್ರತಿ ವರ್ಷದ ಇಷ್ಟು ಪ್ರಮಾಣದಲ್ಲಿ ನೀರು ಬಂದಾಗ ಮುಧೋಳ್ ತಾಲೂಕಿನ ಮಾಚಕನೂರು ದೇವಾಲಯ ಮುಳಗಡೆ ಆಗಲಿದೆ.ಗೋಪುರ ಮುಳಗಡೆ ಆದಾಗ ಮಾತ್ರ ಪ್ರವಾಹ ಉಂಟಾಗುವುದು ಈಗ ಅಷ್ಟೊಂದು ಪ್ರವಾಹ ಉಂಟಾಗಿಲ್ಲ ಎಂದು ತಿಳಿಸಿದರು.ಹಿಡಕಲ್ ಜಲಾಶಯದಿಂದ 43 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು,ಪ್ರವಾಹ ಉಂಟಾಗುವ ಭಯ ಇಲ್ಲ.ಕೃಷ್ಣಾ ನದಿಗೆ 1.47 ಲಕ್ಷ ಕ್ಯೂಸೆಕ್ಸ ನೀರು ಬರುತ್ತಿರುವ ಹಿನ್ನಲೆ ಎರಡು ಕಡೆಯ ನೀರು ಆಲಮಟ್ಟಿ ಸೇರುತ್ತಿರುವುದರಿಂದ ಆಲಮಟ್ಟಿ ಜಲಾಶಯ ದಿಂದ 2 ಲಕ್ಷ ಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹರಿದು ಬಿಡಲಾಗುತ್ತದೆ.ಎಷ್ಟೇ ಪ್ರಮಾಣದಲ್ಲಿ ನೀರು ಬರುತ್ತಿದೆ.ಅಷ್ಟೇ ಪ್ರಮಾಣದಲ್ಲಿ ಹರಿದು ಬಿಡಲಾಗುತ್ತದೆ ಎಂದು ತಿಳಿಸಿದ ಅವರು,ಒಂದು ವೇಳೆ ಪ್ರವಾಹ ಉಂಟಾದರೂ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.ಈಗಾಗಲೇ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಅನುದಾನ 70 ಕೋಟಿ ಹಾಗೂ ತಹಶೀಲ್ದಾರ ಬಳಿ 12 ಕೋಟಿ ಒಟ್ಟು 82 ಕೋಟಿ ವಿಪತ್ತು ನಿರ್ವಹಣೆ ಹಣ ಇದ್ದು,ಎಲ್ಲಾ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಮುಂಜಾಗ್ರತಾ ಕ್ರಮವಾಗಿ ಬಾದಿತವಾಗುವ ಗ್ರಾಮಗಳ ಸಂತ್ರಸ್ತರನ್ನು ವಸತಿ ನಿಲಯಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ. ಪರಿಹಾರ ಕಾರ್ಯದಲ್ಲಿ ಅಧಿಕಾರಿಗಳು ಯಾವುದೇ ಲೋಪವೆಸಗದಂತೆ ಕ್ರಮಕೈಗೊಳ್ಳಬೇಕು. ಯಾವುದೇ ಲೋಪವೆಸಗಿದರೆ ನಿರ್ದಾಕ್ಷಿಣ್ಯವಾಗಿ ಕ್ರಮಜರುಗಿಸಲಾಗುವುದು. ಕೃಷಿ ಚಟುವಟಿಕೆಗಳಿಗೆ ಅಗತ್ಯ ಬಿತ್ತನೆ ಬೀಜ ರಸಗೊಬ್ಬರಗಳಿಗೆ ಕೊರತ ಇಲ್ಲ ಎಂದು ಅವರು ತಿಳಿಸಿದರು.
ಸಂದರ್ಭದಲ್ಲಿ ಸಂಸದರಾದ ಶ್ರೀ ಪಿ.ಸಿ. ಗದ್ದಿಗೌಡರ್, ಶಾಸಕರಾದ ಡಾ. ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ರಾಜೇಂದ್ರ, ಎಸ್ ಪಿ ಶ್ರೀ ಲೋಕೇಶ್ ಜಗಲಾಸರ ಸಿಇಓ ಶ್ರೀ ಭೂಪಾಲನ ಮತ್ತಿತರರು ಉಪಸ್ಥಿತರಿದ್ದರು.