Friday, July 1, 2022

Latest Posts

ಪ್ರಸೂತಿ ವಾರ್ಡ್‌ನಲ್ಲಿ ಕೊರೋನಾ ಪಾಸಿಟಿವ್ ಸೋಂಕಿತ ಗರ್ಭಿಣಿ| ಬೆಂಗಳೂರು ಆಸ್ಪತ್ರೆ ಸಿಬ್ಬಂದಿ ಕಂಗಾಲು!

ಬೆಂಗಳೂರು: ನಗರದ ಪ್ರತಿಷ್ಠಿತ ವಾಣಿವಿಲಾಸ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯೊಬ್ಬರಿಗೆ ಕೊರೋನಾ ಪಾಸಿಟಿವ್ ವರದಿಯಾಗಿರುವುದು ಇಲ್ಲಿನ ವೈದ್ಯ ರೋಗಿ ವೃಂದಕ್ಕೆ ಭಾರಿ ಆತಂಕ ಮೂಡಿಸಿದೆ.
ಪ್ರಸೂತಿಗೆಂದು ದಾಖಲಾಗಿದ್ದ 37 ವರ್ಷದ ವಯಸಿನ ಮಹಿಳೆ, ಶುಕ್ರವಾರದಂದು ಮಗುವಿಗೆ ಜನ್ಮ ನೀಡಿದ್ದು, ಈ ವಿಷಯವನ್ನು ತಿಳಿದ ವೈದ್ಯರು ಮತ್ತು ನರ್ಸ್ ಸಿಬ್ಬಂದಿ ಶನಿವಾರದಂದು ಆಸ್ಪ್ರತ್ರೆ ಮುಂದೆ ಪ್ರತಿಭಟನೆ ನಡೆಸಿದರು. ಕೋವಿಡ್ ಸೋಂಕಿತರಿಗೆ ಅ ಪ್ರತ್ಯೇಕ ಚಿಕಿತ್ಸೆ ನೀಡಬೇಕೆಂಬ ನಿಯಮಾವಳಿ ಇದ್ದರೂ, ಇದು ಉಲ್ಲಂಘನೆಯಾಗಿದೆ ಎಂದು ವಾಣಿ ವಿಲಾಸ ಆಸ್ಪತ್ರೆ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದೆ. ಮಗುವಿಗೆ ಜನ್ಮನೀಡಿದ ತಾಯಿ ಈಗಾಗಲೇ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದು , ಈಕೆಯ ಸಂಪರ್ಕ ಪಡೆದ ಎಲ್ಲ ಸಿಬ್ಬಂದಿಯನ್ನೀಗ ಪತ್ತೆ ಕ್ವಾರಂಟೈನ್‌ಗೊಳಪಡಿಸಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss