ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಸ್ಯಾನ್ ಡಿಯಾಗೋ ಮೃಗಾಲಯದ ಸಫಾರಿ ಪಾರ್ಕ್ನ ಹಲವು ಗೊರಿಲ್ಲಾಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಕೊರೋನಾ ಲಕ್ಷಣಗಳಿಲ್ಲದ ಮೃಗಾಲಯದ ಸಿಬ್ಬಂದಿಯಿಂದ ಗೊರಿಲ್ಲಾಗಳಿ ಸೋಂಕು ಹರಡಿರಬಹುದು. ದೇಶದಲ್ಲಿ ಇದೇ ಮೊದಲ ಬಾರಿಗೆ ವಾನರ ಪ್ರಭೇದದಲ್ಲಿ ಸೋಂಕು ಕಂಡುಬಂದಿರುವು. ಮೃಗಾಲಯದಲ್ಲಿ ಪ್ರಾಣಿಗಳಿರುವಲ್ಲಿ ತೆರಳುವಾಗ ವೈಯಕ್ತಿಕ ರಕ್ಷಣಾ ಕಿಟ್ ಸೇರಿದಂತೆ ಎಲ್ಲ ಕೊರೋನಾ ಮುಂಜಾಗ್ರತೆ ವಹಿಸಲಾಗಿತ್ತು ಎಂದು ಫೆಡರಲ್ ಅಧಿಕಾರಿಗಳು ತಿಳಿಸಿದ್ದಾರೆ.
“ಗೊರಿಲ್ಲಾಗಳಲ್ಲಿ ಕೆಮ್ಮು, ನೆಗಡಿಯ ಹೊರತಾಗಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಕೊರೋನಾ ಸೋಂಕಿತ ಗೊರಿಲ್ಲಾಗಳ ಆರೋಗ್ಯವನ್ನು ಪಶುವೈದ್ಯರು ಗಮನಿಸುತ್ತಿದ್ದಾರೆ. ಚೇತರಿಸಿಕೊಳ್ಳುತ್ತಿವೆ” ಎಂದು ಸ್ಯಾನ್ ಡಿಯಾಗೋ ಮೃಗಾಲಯದ ಸಫಾರಿ ಪಾರ್ಕ್ನ ಕಾರ್ಯನಿರ್ವಾಹಕ ನಿರ್ದೇಶಕಿ ಲಿಸಾ ಪೀಟರ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.