ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದಿದ್ದರೂ ಅಭಿಮಾನಿಗಳು, ಗಣ್ಯರು ಮತ್ತು ಕುಟುಂಬದವರಿಂದ ಪ್ರೀತಿಯ ಶುಭಾಶಯಗಳ ಮಹಾಪೂರವೆ ಹರಿದು ಬಂದಿವೆ. ವಿಶೇಷ ಅಂದರೆ ಅತ್ತಿಗೆ ಮೇಘನಾ ರಾಜ್ ಪ್ರೀತಿಯ ಮೈದುನನಿಗೆ ಭಾವುಕವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಧ್ರುವ ಸರ್ಜಾ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ನೀನು ನನ್ನ ಜೊತೆ ಬಲವಾಗಿ ನಿಂತ ಹಾಗೆ ನಾನು ಯಾವಾಗಲೂ ನಿನ್ನೊಂದಿಗೆ ಇರುತ್ತೇನೆ. ಪ್ರೋಮಿಸ್! ನನ್ನ ಪ್ರೀತಿಯ ಬರ್ತಡೇ ಬಾಯ್, ನಾನು ಯಾವಾಗಲು ನಿನ್ನ ಸಂತೋಷವನ್ನು ಬಯಸುತ್ತೇನೆ. ನನ್ನ ಚಿರು ಯಾವಾಗಲು ನಗುತಿದ್ದಂತೆ ನೀನು ಯಾವಾಗಲು ನಗುತಿರು. ಹುಟ್ಟುಹಬ್ಬದ ಶುಭಾಶಯಗಳು ಮೈದುನ ಎಂದು ಪ್ರೀತಿಯಿಂದ ಶುಭ ಹಾರೈಸಿದ್ದಾರೆ.
ನಿನ್ನೆಯಷ್ಟೆ ಮೇಘನಾ ರಾಜ್ ಅವರಿಗೆ ಸೀಮಂತ ಕಾರ್ಯಕ್ರಮ ಮಾಡಲಾಗಿದೆ. ಚಿರು ನೆನಪಲ್ಲೇ ತುಂಬು ಗರ್ಭಿಣಿ ಮೇಘನಾ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಈ ಸಂಭ್ರಮದಲ್ಲಿ ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬದವರು ಭಾಗಿಯಾಗಿದ್ದರು. ಸೀಮಂತ ಸಂಭ್ರಮದ ದಿನ ಸಂಜೆ ‘ಧ್ರುವ ಸರ್ಜಾ ಹುಟ್ಟುಹಬ್ಬವನ್ನು ಆಚರಿಸಿಲಾಗಿದೆ.