Saturday, August 13, 2022

Latest Posts

ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ಕೊರೋನಾ: ಪಾಸಿಟಿವ್ ಎಂದಾಕ್ಷಣ ಓಡಿ ಹೋದ ಪತಿ

ಬೆಂಗಳೂರು: ಪತ್ನಿಗೆ ಕೊರೋನಾ ದೃಢಪಟ್ಟಿದ್ದು,ಪತಿ ಪರಾರಿಯಾಗಿದ್ದಾನೆ.
ಪ್ರೀತಿಸಿ ಮದುವೆಯಾಗಿದ್ದ ಪತಿ, ಪತ್ನಿಯ ಅಂತ್ಯಕ್ರಿಯೆಗೂ ಬಾರದೇ ಪರಾರಿಯಾಗಿದ್ದಾನೆ.
ಬೆಂಗಳೂರಿನ ಜೆಸಿ ನಗರದಲ್ಲಿ ದಂಪತಿ ವಾಸವಾಗಿದ್ದು, ಇಬ್ಬರೂ ಕೆಲಸ ಮಾಡುತ್ತಿದ್ದರು. ನಾಲ್ಕೈದು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಗೆ ಕೊರೋನಾ ಟೆಸ್ಟ್ ಮಾಡಿಸಿದ್ದು,ಪಾಸಿಟಿವ್ ಬಂದಿದೆ. ಈ ವಿಷಯ ತಿಳಿದ ತಕ್ಷಣವೇ ಪತಿ ಪರಾರಿಯಾಗಿದ್ದಾನೆ. ಪತ್ನಿಗೆ ಕೊರೋನಾ ಎಂದು ತಿಳಿದ ತಕ್ಷಣ ಓಡಿ ಹೋದ ಪತಿ, ಪತ್ನಿಯ ಅಂತ್ಯಕ್ರಿಯೆಗೂ ಬಾರದೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss