Sunday, June 26, 2022

Latest Posts

ಪ್ರೀತಿಸುವ ಆಸೆಯೇನೋ ಇದೆ! ಆದರೆ ಯಾವ ರೀತಿ ಹುಡುಗ ಎಂಬ ಗೊಂದಲವೇ? ಇಲ್ಲಿದ್ದಾರೆ 10 ರೀತಿಯ ಹುಡುಗರು…

ಹುಡುಗಿಯರು ಯೋಚಿಸುವುದು ಕಡಿಮೆ. ಬೇಗ ಇನ್ನೊಬ್ಬರನ್ನು ನಂಬಿ ಬಿಡುತ್ತಾರೆ. ಸಕ್ಕರೆಯಂತಹ ನಾಲ್ಕು ಮಾತುಗಳು ಸಾಕು, ಅವರು ತಮ್ಮವರೇ ಎಂದು ಪ್ರೀತಿಸಿಬಿಡುತ್ತಾರೆ. ಆದರೆ ನಂಬಿಕೆ ಮುರಿಯುವಂತಹ ಸಣ್ಣ ತಪ್ಪು ಹುಡುಗನಿಂದಾದರೂ ಅವರು ಸಹಿಸಲಾರರು. ಅವನಿಗೆ ಬಾಯ್ ಬಾಯ್ ಹೇಳಿಯೇ ಬಿಡುತ್ತಾರೆ. ಎಷ್ಟೋ ಮಂದಿಗೆ ಪ್ರೀತಿ ಶುರುವಿನಲ್ಲಿ ಎಲ್ಲವೂ ಸರಿಯಾಗಿಯೇ ಇರುತ್ತದೆ. ದಿನ ಕಳೆದಂತೆ ಅವನು ಬಿಸಿ ತುಪ್ಪದಂತೆ ಉಗುಳಲು ಆಗದು, ನುಂಗಲು ಆಗದಂತಾಗುತ್ತದೆ. ಹಾಗಾಗಿಯೇ ಆಯ್ಕೆ ಸರಿಯಾಗಿರಲಿ. ನಮ್ಮಲ್ಲಿ ಹಲವಾರು ರೀತಿಯ ಹುಡುಗರಿರುತ್ತಾರೆ.

 • ಮೊದಲನೇಯವನು ಬೆಸ್ಟ್ ಫ್ರೆಂಡ್ ಟೈಪ್‌ನ ಹುಡುಗ. ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾನೆ. ಸುಳ್ಳು, ಮೋಸ ಎಂಬುದಿಲ್ಲ. ತಮಾಷೆಯಾಗಿ ವರ್ತಿಸುತ್ತಾನೆ. ಯಾವಾಗಲೂ ನಿಮಗೆ ಒಳ್ಳೆಯದನ್ನೇ ಬಯಸುತ್ತಾನೆ. ಎಂತಹ ಸಂದರ್ಭದಲ್ಲಿಯೂ ಅವನನ್ನು ನಂಬಬಹುದು. ನಿಮ್ಮ ಸಂತೋಷ, ದುಃಖಗಳನ್ನು ಸರಿಯಾಗಿ ಹಂಚಿಕೊಳ್ಳುತ್ತಾನೆ. ಇಂತಹ ಒಳ್ಳೆಯ ಗೆಳೆಯನನ್ನು ಪ್ರೀತಿಯಲ್ಲಿ ಎಳೆಯಬೇಡಿ. ಇವನು ಜೀವನವಿಡೀ ಒಳ್ಳೆಯ ಸ್ನೇಹಿತನಾಗಿರಲಿ.
 • ಎರಡನೇಯವನು ಸ್ವಲ್ಪ ದಿನಗಳ ಕಾಲ ಮಾತ್ರ ವಾವ್ ಅನ್ನಿಸುವಂತಹ ಹುಡುಗ. ಆತ ತಾರ್ಕಿಕವಾಗಿ ಆಲೋಚಿಸಲಾರ, ಕಂಗಾಲು ಪಾರ್ಟಿ, ವಾಸ್ತವದೆಡೆ ಹೆಜ್ಜೆ ಇಡಲು ಭಯ, ಆದರೆ ಫೋಸ್ ಕೊಡುವುದರಲ್ಲಿ ನಂಬರ್ ಒನ್. ತಾನು ಏನ್ ಬೇಕಾದರೂ ಸಾಧಿಸಬಲ್ಲೆ, ಮಹಾನ್ ಬುದ್ದಿವಂತ ಎಂದು ಕೊಂಡಿರುತ್ತಾನೆ. ಅವನಿಗೆ ಸಂಬಂಧಗಳೆಂದರೆ ’ಕೇರ‍್ಲೆಸ್’. ಆದರೆ ಚೆನ್ನಾಗಿ ಮಾತನಾಡಿ ನಗಿಸಬಲ್ಲ. ಹಾಗಾಗಿ ಮೊದಮೊದಲು ನಮಗೆ ವಾವ್ ಅನಿಸುತ್ತದೆ. ದಿನಕಳೆದಂತೆ ವ್ಯಾಕ್ ಬೋರ್ ಅನಿಸುತ್ತದೆ.
 • ಮೂರನೇಯವನು ಅತಿರೇಕದ ಬುದ್ಧಿವಂತ. ಇವನ ಬುದ್ಧಿಶಕ್ತಿಯ ಬಗ್ಗೆ ಮಾತನಾಡುವಂತೆಯೇ ಇಲ್ಲ. ಇವನು ತೀರಾ ಅಹಂ ಹೊಂದಿರುತ್ತಾನೆ. ಕಂತ್ರಿ ಬುದ್ಧಿ ಬೇರೆ ಇರುತ್ತದೆ. ಒಳ್ಳೆಯತನದಲ್ಲಿ ವರ್ತಿಸುವುದು ಹೇಗೆ ಎಂಬುದರ ಅರಿವೆ ಇರುವುದಿಲ್ಲ. ಅವನಿಗೆ ಎಲ್ಲದರ ಬಗ್ಗೆಯೂ ಆಳವಾದ ಜ್ಞಾನ. ಅವನಿಗೆ ಸರಿ ಸಮಾನವಾಗಿರಬೇಕೆಂದರೆ ನಾವು ಅಷ್ಟೇ ಅಪ್‌ಡೇಟ್ ಆಗಿರಬೇಕು. ಸಣ್ಣ ಕೋಲಿನ ಮೇಲೆ ಡೊಂಬರಾಟ ನಡೆಸಿದಂತಾಗುತ್ತದೆ.
 • ನಾಲ್ಕನೇಯವನು ನಾವು ಸೋ ಸ್ವೀಟ್ ಎನ್ನುವ ಹುಡುಗ. ಇಂತವರು ತುಂಬಾ ಸೆನ್ಸಿಟಿವ್, ದಯಾಮಯಿಗಳು. ತುಂಬಾ ಮುಗ್ಧರು. ನಾಲ್ಕು ಗಟ್ಟಿ ಮಾತಾಡಿದರೆ ಕಣ್ಣೀರು ಸುರಿಸುವವರು. ಎಲ್ಲಾ ಸಂದರ್ಭದಲ್ಲೂ ನಮ್ಮ ಬೆಂಬಲಕ್ಕೆ ನಿಲ್ಲುವುದಿಲ್ಲ. ಆದರೆ ಎಂತಹ ಸಿಕ್ರೇಟ್ ಇದ್ದರೂ ಅವನೊಂದಿಗೆ ಹಂಚಿಕೊಳ್ಳಬಹುದು. ಇಂತಹವನ ಆಕರ್ಷಣೆಗೆ ಹುಡುಗೀಯರು ಬೀಳುತ್ತಾರೆ. ಆದರೆ ತುಂಬಾ ದಿನಗಳ ಕಾಲಾ ಪ್ರೀತಿಸಲಾರರು. ಇಂತಹವರು ಗೆಳೆಯನಾಗಿರುವುದು ಒಳ್ಳೆಯದು.
 • ಐದನೇಯವನು ಮಿಸ್ಟರ್ ಫರ್ಪೆಕ್ಟ್. ಎಲ್ಲದರಲ್ಲೂ ನಂಬರ್ ಒನ್. ಇವರ ಜೊತೆ ಮಾತನಾಡುವುದೇ ಒಂದು ಹಬ್ಬ. ಅವನ ಜೊತೆ ಕಳೆದ ಕ್ಷಣಗಳು ಸುಂದರ. ಪ್ರತಿಯೊಬ್ಬರಿಗೂ ಇಷ್ಟವಾಗುವ ವ್ಯಕ್ತಿತ್ವ. ಬುದ್ಧಿವಂತ, ಸುಂದರಾಂಗ. ಅವನಿಗೆ ತಾನು ಮಿಸ್ಟರ್ ಫರ್ಪೆಕ್ಟ್ ಎಂದು ಗೊತ್ತಿರುತ್ತದೆ. ಎಂದಿಗೂ ಅವನು ನಮ್ಮ ತಾಳಕ್ಕೆ ಕುಣಿಯಲಾರ. ನಾವು ಅವನ ತಾಳಕ್ಕೆ ಕುಣಿಯಬೇಕಾಗುತ್ತದೆ.
 • ಆರನೇಯವನು ಡಮ್ಮಿ ಫೀಸ್. ಶುದ್ಧ ಒರಟ. ದೂರದಿಂದ ನೋಡಿದರೆ ಇಂಥವನ ಜೊತೆ ಇರೋದು ಹೇಗೆ ಅಂತಾ ಅನಿಸಬೇಕು. ಆತರದವರು ತುಂಬಾ ಸೂಕ್ಷ್ಮ. ಜೊತೆಗೆ ಯಾವುದೇ ಅನುಮಾನವಿಲ್ಲದೆ ನಂಬಬಹುದು. ಹುಡುಗೀಯರು ಮೊದಲ ಬಾಯ್‌ಫ್ರೆಂಡ್ ಕೈ ಕೊಟ್ಟಾಗ ಮಾತ್ರ ಅವರ ಹಿಂದೆ ಹೋಗುತ್ತಾರೆ. ಆದರೆ ಸಮಸ್ಯೆ ಇರೋದೇ ಬೇರೆ ಇಂಥವರು ಹುಡುಗೀಯರಿಗಿಂತ ವ್ಯಾಯಾಮ, ಜಿಮ್, ಟ್ರಿಪ್ ಇಂಥವದನ್ನೇ ಇಷ್ಟಪಡುತ್ತಾರೆ.
 • ಏಳನೇಯ ವಿಧದವರು ಕಲ್ಲಿನಂತೆ, ಯಾವಾಗಲೂ ಮಂಗನಂತೆ ಆಡುತ್ತಾರೆ. ಅವರ ಮನಃಸ್ಥಿತಿ ಅರಿಯುವುದು ಕಷ್ಟ. ಇಂತವರು ಸಂಬಂಧಗಳನ್ನು ಸುಲಭವಾಗಿ ಒಪ್ಪಿಕೊಳ್ಳಲಾರರು. ಒಂದು ವೇಳೆ ಸಂಬಂಧಗಳನ್ನು ಮಾಡಿಕೊಂಡರೆ ಅದರಿಂದ ಅವರು ಬೇಗ ಹೊರಬರಲಾರರು. ಇಂಥವರಿಂದ ದೂರ ಇರುವುದೇ ಒಳ್ಳೆಯದು.
 • ಎಂಟನೇಯ ವಿಧದವರ ಜೊತೆ ನಾವು ಸ್ವಲ್ಪ ಎಚ್ಚರಿಕೆಯಿಂದಿರಬೇಕು. ಈ ಗುಂಪಿಗೆ ಸೇರುವವರು ಅಪಾಯಕಾರಿ ಮೋಡಿಗಾರರು. ಸಭ್ಯತೆ, ತಮಾಷೆ, ಅಂದ, ಗಮನ ಸೆಳೆಯುವ ಮಾತುಗಾರಿಕೆ ಹುಟ್ಟಿನಿಂದಲೇ ಬಂದಿರುತ್ತದೆ. ಅವರು ಏನನ್ನು ಆಲೊಚಿಸುತ್ತಾರೆಂದು ಸುಲಭಕ್ಕೆ ಯಾರಿಗೂ ತಿಳಿಯುವುದಿಲ್ಲ. ನನ್ನ ಜೀವನದ ಮೊದಲ ಹುಡುಗಿ ಎಂದು ನಂಬಿಸಿತ್ತಾರೆ. ಗಿಫ್ಟ್ ಕೊಡುವುದರಲ್ಲಿ ಧಾರಾಳಿಗಳು. ಇಂಥವರಿಗೆ ಗೆಳೆಯರಿಗಿಂತ ಗೆಳತಿಯರೇ ಹೆಚ್ಚು.
 • ಒಂಬತ್ತನೇಯ ವಿಧದವರು ಹೆಚ್ಚಾಗಿ ಚಂದಕ್ಕೆ ಶ್ರೀಮಂತಿಕೆಗೆ ಬೆಲೆ ಕೊಡುವವರಾಗಿತ್ತಾರೆ. ತಮ್ಮನ್ನು ತಾವೇ ಹೊಗಳಿಕೊಳ್ಳುವವರಾಗಿರುತ್ತಾರೆ. ಇಂಥವರಿಗೆ ಹುಡುಗಿಯರೆಂದರೆ ರಾಜ್ಯಗಳಂತೆ ಒಂದಾದ ನಂತರ ಒಂದರಂತೆ ರಾಜ್ಯಗಳ ಕೈ ವಶ ಮಾಡಿಕೊಳ್ಳುವ ಹುಚ್ಚಿರುತ್ತದೆ. ತಮಗಿಂತ ಹುಡುಗಿಯರ ಬಗ್ಗೆ ತಿಳಿದುಕೊಂಡಿರುತ್ತಾರೆ. ದುರಂತ ಎಂದರೆ ತಮ್ಮ ಈ ಅರಿವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.
 • ಹತ್ತನೇಯ ವಿಧದವರು ಹೆಚ್ಚು ಮಾತುಗಾರರಲ್ಲ. ಆಡಿದಷ್ಟೇ ಮಾತು ಅರ್ಥಪೂರ್ಣವಾಗಿ ಇರುತ್ತದೆ. ನಮ್ಮೊಂದಿಗೆ ಸಭ್ಯತೆಯಿಂದ ವರ್ತಿಸುತ್ತಾರೆ. ನಿಮ್ಮ ಮೇಲೆ ಪ್ರೀತಿಗಿಂತ ನಂಬಿಕೆ ಹೆಚ್ಚಾಗಿ ಇರುತ್ತದೆ. ನಿಮ್ಮನ್ನು ಪ್ರೀತಿಸಿದಷ್ಟು ನಿಮ್ಮ ಹೆತ್ತವರನ್ನೂ ಪ್ರೀತಿಸುತ್ತಾರೆ. ಭಾವನಾತ್ಮಕವಾಗಿ, ಪ್ರಾಕ್ಟಿಕಲ್‌ಆಗಿ ಎರಡೂ ರೀತಿಯಲ್ಲೂ ಇರುತ್ತಾರೆ. ಎಂತಹ ನಿಮ್ಮ ರಹಸ್ಯಗಳನ್ನೂ ಇವರೊಂದಿಗೆ ಹಂಚಿಕೊಳ್ಳಬಹುದು. ಇವರಿಗೆ ಗೆಳತಿಯರು ಕಡಿಮೆ. ಹೆಚ್ಚಾಗಿ ನಿಮ್ಮನ್ನು ಸಿಂಪಲ್ ಆಗಿ ಇಷ್ಟಪಡುತ್ತಾರೆ. ನಿಮಗೆ ಯಾವುದೇ ಒತ್ತಡ ಹೇರುವುದಿಲ್ಲ. ಅನುಮಾನವೆಂತೂ ದೂರದ ಮಾತು. ಗಾಳಿಮಾತಿಗೂ ಕಿವಿಗೊಡಲಾರರು. ಧೈರ್ಯ ಹೆಚ್ಚಾಗಿ ಇರುತ್ತದೆ. ಅಂದಕ್ಕೆ ಬೆಲೆ ಕೊಡುವುದಿಲ್ಲ. ಈ ವಿಧದವರು ನೂರಕ್ಕೆ ಒಬ್ಬರು. ಇಂಥವರು ನಿಮಗೆ ಸಿಕ್ಕರೆ ಖಂಡಿತ ಮಿಸ್ ಮಾಡಿಕೊಳ್ಳಬೇಡಿ.

  ಆಯ್ಕೆ ನಿಮಗೆ ಬಿಟ್ಟಿದ್ದು.ಒಳ್ಳೆಯ ಸಂಗಾತಿಯ ಆಯ್ಕೆಯಿಂದ ಜೀವನದ ದೆಸೆಯೂ ಬದಲಾಗಬಹುದು. ಸಂಗಾತಿಯ ಆಯ್ಕೆಯಲ್ಲಿ ಎಡವಿದರೆ ಜೀವನದಲ್ಲೇ ಎಡವಿದಂತಾಗುತ್ತದೆ. ನಿಮಗೆ ಹೊಂದುವ ಸಂಗಾತಿಯೊಂದಿಗೆ ಖುಷಿಯಿಂದಿರಿ.
  ಬಿ ಹ್ಯಾಪಿ…..

    -ಕಾವ್ಯಾ ಜಕ್ಕೊಳ್ಳಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss