Tuesday, July 5, 2022

Latest Posts

ಪ್ರೇಕ್ಷಕರ ಮನ ಸೂರೆಗೊಂಡ ರಂಗಾಯಣ ನಾಟಕ ‘ಚಾಣಕ್ಯ ಪ್ರಪಂಚ’

ಹೊಸ ದಿಗಂತ ವರದಿ, ಶಿವಮೊಗ್ಗ:

ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸಿರುವ ‘ಚಾಣಕ್ಯ ಪ್ರಪಂಚ’ ನಾಟಕ ಪ್ರದರ್ಶನವನ್ನು ಹಿರಿಯ ರಂಗಕರ್ಮಿ ಅ.ಚಿ.ಪ್ರಕಾಶ್ ಭಾನುವಾರ ಉದ್ಘಾಟಿಸಿದರು. ನಾಟಕ ನಿರ್ದೇಶಕ ವೆಂಕಟರಮಣ ಐತಾಳ, ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ, ರಂಗ ಸಮಾಜದ ಸದಸ್ಯರಾದ ಹಾಲಸ್ವಾಮಿ, ಜೀವನರಾಂ ಸುಳ್ಯ ಉಪಸ್ಥಿತರಿದ್ದರು.
ಭರ್ಜರಿ ಸ್ಪಂದನೆ
ರಂಗಾಯಣ ರೆಪರ್ಟರಿ ಕಲಾವಿದರು ಅಭಿನಯಿಸಿದ ಚಾಣಕ್ಯ ಪ್ರಪಂಚ ನಾಟಕಕ್ಕೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಮನೋರಂಜನಾ ಕಾರ್ಯಕ್ರಮಗಳು ಕಳೆದ ಎಂಟು ತಿಂಗಳಿಂದ ಸ್ಥಗಿತಗೊಂಡಿದ್ದವು. ದೀರ್ಘಕಾಲದ ನಂತರ ಇದೇ ಮೊದಲ ಬಾರಿಗೆ ಪ್ರದರ್ಶನವಾದ ಈ ನಾಟಕ್ಕೆ ಕೊರೋನಾ ಲೆಕ್ಕಿಸದೆ ಕಲಾಸಕ್ತರು ಆಗಮಿಸಿದ್ದರು. 500 ಆಸನದ ಸುವರ್ಣ ಸಾಂಸ್ಕೃತಿಕ ಭವನಕ್ಕೆ 250 ಜನರಿಗೆ ಮಾತ್ರ ಅವಕಾಶ ಎಂದು ಹೇಳಲಾಗಿತ್ತು. ಅದರೆ ಎಲ್ಲಾ 500 ಆಸನಗಳು ಭರ್ತಿಯಾಗಿದ್ದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss