ಮೆಲ್ಬರ್ನ್: ಪ್ರೇಯಸಿಯ ಖುಷಿ ಪಡಿಸಲು ಗ್ರಾಹಕರ 31 ಕೋಟಿ ರೂ. ಉಡಾಯಿಸಿದ ವಿಲಕ್ಷಣ ಘಟನೆಯೊಂದು ನಡೆದಿದೆ. ಈ ವ್ಯಕ್ತಿಯನ್ನು 39 ವರ್ಷದ ಆಂಡಿ ಲೀ ಎಂದು ಗುರುತಿಸಲಾಗಿದೆ. ಆತ ಮೆಲ್ಬರ್ನ್ನ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್ ಆಗಿದ್ದ. ಆತನಿಗೆ 67 ಲಕ್ಷ ವೇತನವಾಗಿ ಸಿಗುತ್ತಿತ್ತು. ಆದರೆ ಅಚಾನಕ್ಕಾಗಿ ಆತನ ಜೀವನಕ್ಕೆ ಯುವತಿಯೊಬ್ಬಳು ಎಂಟ್ರಿ ಕೊಟ್ಟಿದ್ದು, ನೊಡ ನೋಡುತ್ತಿದ್ದಂತೆಯೇ ಎಲ್ಲವೂ ಬದಲಾಗಿದೆ.
ಹೆರಾಲ್ಡ್ನಲ್ಲಿ ಪ್ರಕಟವಾದ ವರದಿಯನ್ವಯ ಯುವತಿಯನ್ನು ಇಂಪ್ರೆಸ್ ಮಾಡಲು ಆತ ತನ್ನ ಗ್ರಾಹಕರ ಖಾತೆಯಿಂದ ಹಣ ಲಪಟಾಯಿಸತೊಡಗಿದ್ದ. ಆತ ಅನೇಕ ಗ್ರಾಹಕರನ್ನು ನಕಲಿ ಟರ್ಮ್ ಡೆಪಾಸಿಟ್ ಮಾಡಿಸಿದ್ದು, ಈ ಹಣವನ್ನು ತಪ್ಪು ಖಾತೆಗೆ ವರ್ಗಾಯಿಸಿ ಕಳ್ಳತನ ಮಾಡುತ್ತಿದ್ದ.
ಆಗಸ್ಟ್ 2014 ನಿಂದ ಏಪ್ರಿಲ್ 2019ರವರೆಗೆ ಆತ ಅನೇಕ ಗ್ರಾಹಕರ ಖಾತೆಯಿಂದ ಹಣ ಕದ್ದಿದ್ದಾನೆ. ಈ ಹಣದಿಂದ ಆತ ತನ್ನ ಪ್ರೇಯಸಿಗೆ ದುಬಾರಿ ಗಿಫ್ಟ್ ಕೊಡಿಸುತ್ತಿದ್ದ ಮತ್ತು ಜೂಜಾಟ ಹಾಗೂ ಪ್ರವಾಸಗಳಿಗೆ ಖರ್ಚು ಮಾಡುತ್ತಿದ್ದ. ಆಲ್ಲದೆ ಅದ್ಧೂರಿಯಾಗಿ ಮದುವೆಯೂ ಆಗಿದ್ದ. ಬಂದಿದ್ದ ಅತಿಥಿಗಳಿಗೆ ಪಾರ್ಟಿ ಆಯೋಜಿಸಿ ಬೇಕಾದಷ್ಟು ಹಣವನ್ನು ಖರ್ಚು ಮಾಡಿದ್ದ. ತನಗಾಗಿ ಐಷಾರಾಮಿ ಕಾರು ಹಾಗೂ ಸಹೋದರಿಗಾಗಿ ಮನೆಯನ್ನೂ ಖರೀದಿಸಿದ್ದಾನೆ.
ಆದರೆ 2019 ರ ಡಿಸೆಂಬರ್ನಲ್ಲಿ ಆತ ಸಿಕ್ಕಿಹಾಕಿಕೊಂಡಿದ್ದು ಕೊನೆಗೂ ಆತನ ಬಂಡವಾಳ ಬಯಲಾಗಿದೆ. ಒಂದೆಡೆ ಜೈಲು ಶಿಕ್ಷೆಯಾದರೆ, ಮತ್ತೊಂದೆಡೆ ಹುಡುಗಿಯೂ ಟೋಪಿ ಹಾಕಿ ಪರಾರಿಯಾಗಿದ್ದಾಳೆ.