ಶಿಯಾ ಸೀಡ್ಸ್ ಬಗ್ಗೆ ಕೇಳಿದ್ದೀರಾ? ಕೆಲವರು ಅದನ್ನು ಕಾಮಕಸ್ತೂರಿ, ತಂಪಿನ ಬೀಜ ಹೀಗೆ ಹಲವಾರು ಹೆಸರಿನಲ್ಲಿ ಕರೆಯುತ್ತಾರೆ. ತುಂಬ ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಇದರಿಂದಾಗುವ ಲಾಭಗಳನ್ನು ತಿಳಿಸಿದರೆ ಪ್ರತಿನಿತ್ಯ ನೀವು ಸೇವಿಸುವ ಆಹಾರದಲ್ಲಿ ಶಿಯಾ ಸೀಡ್ಸ್ ಖಂಡಿತ ಇರುತ್ತದೆ.. ಹಾಗಾದರೆ ಶಿಯಾ ಸೀಡ್ಸ್ನಿಂದ ಏನು ಉಪಯೋಗಗಳಿವೆ ಕೇಳಿ..
ನ್ಯೂಟ್ರಿಯಂಟ್ಸ್ ತಾಣ: ಶಿಯಾ ಸೀಡ್ಸ್ನಲ್ಲಿ ಹಲವಾರು ನ್ಯೂಟ್ರಿಯಂಟ್ಸ್ಗಳಿವೆ. ಕ್ಯಾಲೋರಿ ಮಾತ್ರ ನಿಯಮಿತ, ಇದರಲ್ಲಿ ಫೈಬರ್, ಪರೋತೀನ್, ಫ್ಯಾಟ್, ಕ್ಯಾಲ್ಷಿಯಂ,ಮ್ಯಾಂಗನೀಸ್, ಮೆಗ್ನಿಶಿಯಮ್, ಫಾಸ್ಪರಸ್ ಅಂಶ ಕೂಡ ಇವೆ.
ಆಂಟಿ ಆಕ್ಸಿಡೆಂಟ್ಸ್ ತುಂಬಿದೆ: ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಹೆಚ್ಚಿದೆ. ಇದು ಹೆಚ್ಚಿದ್ದರೆ ಕ್ಯಾನ್ಸರ್ ಅಂಶ ತಡೆಗಟ್ಟುತ್ತದೆ.
ಜೀರ್ಣಕ್ರಿಯೆಗೆ ರಾಮಬಾಣ: ಪ್ರತಿನಿತ್ಯ ನೀರಿನಲ್ಲಿ ಶಿಯಾ ಸೀಡ್ಸ್ ನೆನೆಸಿಟ್ಟು ಸ್ವಲ್ಪ ಸಮಯ ಬಿಟ್ಟು ಕುಡಿಯಬೇಕು. ಇದರಲ್ಲಿರುವ ಫೈಬರ್ಗುಣ ಪಚನ ಕ್ರಿಯೆಗೆ ಸಹಕರಿಸುತ್ತದೆ.
ತೂಕ ಇಳಿಸುವಿಕೆಗೂ ಸಹಕಾರಿ: ತೂಕ ಇಳಿಸಬೇಕು ಎನ್ನುತ್ತಿದ್ದರೆ ಬೇರೆ ಏನೇನನ್ನೋ ಏಕೆ ಟ್ರೈ ಮಾಡುತ್ತೀರಿ. ಶಿಯಾ ಸೀಡ್ಸ್ನಲ್ಲಿ ತೂಕ ಇಳಿಸುವಿಕೆ ಜೊತೆಗೆ ನೂರಾರು ಆರೋಗ್ಯಕರ ಅಂಶಗಳಿವೆ. ಪ್ರತಿನಿತ್ಯದ ಆಹಾರದಲ್ಲಿ ಒಂದು ಚಮಚ ಶಿಯಾ ಬೀಜಗಳನ್ನು ಸೇವಿಸಿದರೂ ಸಾಕು ತೂಕ ಕಡಿಮೆಯಾಗುತ್ತದೆ.
ಹೃದಯ ಸಂಬಂಧಿಕಾಯಿಲೆ ಮಾಯ: ಶಿಯಾ ಬೀಜವನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ನಿಮ್ಮಿಂದ ದೂರ ಉಳಿಯುತ್ತವೆ.