ಹೊಸದಿಗಂತ ಆನ್ ಲೈನ್ ಡೆಸ್ಕ್:
ಪ್ಲಾಸ್ಮಾ ಥೆರಪಿಯಿಂದ ಕೊರೋನಾ ಸೋಂಕಿತರು ಗುಣಮುಖರಾಗಲು ಸಾಧ್ಯವಾಗುತ್ತಿಲ್ಲವೆಂದು ಪ್ಲಸ್ಮಾ ಥೆರಪಿ ಕೈಬಿಡಲು ಐಸಿಎಂ ಆರ್ ತೀರ್ಮಾನಿಸಿತ್ತು. ಆದರೆ ಪ್ಲಾಸ್ಮಾ ಥೆರಪಿಯಿಂದ ಕೊರೋನಾ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ವೈದ್ಯಕೀಯ ಸಂಸ್ಥೆಗಳು ಮತ್ತು ತಜ್ಞರು ತಿಳಿಸಿದ್ದಾರೆ.
ಕೋವಿಡ್ -19 ಗುಣಮುಖರಾದ ವ್ಯಕ್ತಿಯ ಪ್ಲಾಸ್ಮವನ್ನು ಸೋಂಕಿತ ರೋಗಿಗೆ ವರ್ಗಾಯಿಸುವ ಮೂಲಕ ರೋಗವನ್ನು ಗುಣಪಡಿಸಬಹುದು. ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಮತ್ತು ಇದನ್ನು ಅನೇಕ ದೇಶಗಳು ಅತ್ಯುತ್ತಮ ಚಿಕಿತ್ಸೆಯಾಗಿ ಸ್ವೀಕರಿಸುತ್ತವೆ ಎಂದು ತಿಳಿಸಿದೆ.
ಐಸಿಎಂಆರ್ ದೇಶಾದ್ಯಂತ 39 ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಕೋವಿಡ್ -19 ಹೊಂದಿರುವ 464 ವಯಸ್ಕರಿಗೆ ಏಪ್ರಿಲ್ 22 ರಿಂದ ಜುಲೈ 14 ರ ನಡುವೆ ಪ್ಲಾಸ್ಮಾ ನೀಡಲಾಗಿತ್ತು. ಬಳಿಕ ಐಸಿಎಂಆರ್ ಚಿಕಿತ್ಸೆಯನ್ನು ನಿಲ್ಲಿಸುವ ತೀರ್ಮಾನಕ್ಕೆ ಬಂದಿತು.