Thursday, June 30, 2022

Latest Posts

ಪ್ಲಾಸ್ಮಾ ದಾನದ ಜಾಗೃತಿ ಸಭೆ| ಉಸಿರಾಟ ಸಮಸ್ಯೆಗೆ ಪ್ಲಾಸ್ಮಾ ಚಿಕಿತ್ಸೆಯೇ ಮಾರ್ಗ

ಧಾರವಾಡ: ಕೊರೋನಾ ಸೋಂಕಿನಿoದ ಆಸ್ಪತ್ರೆಗೆ ದಾಖಲಾಗಿ ಉಸಿರಾಟ ಹಾಗೂ ಇತರ ಗಂಭೀರ ಸಮಸ್ಯೆಯಿಂದ ಬಳಲುವ ರೋಗಿಗಳಿಗೆ ಮಾತ್ರೆ ನೀಡಲು ಸಾಧ್ಯವಿಲ್ಲ. ಸಾಮಾನ್ಯ ರೋಗಿಗಳಂತೆ ಇವರಿಗೆ ಚಿಕಿತ್ಸೆ ನೀಡಿದಲ್ಲಿ ಇನ್ನಷ್ಟು ಸಮಸ್ಯೆ ಉದ್ಭವ ಆಗಲಿವೆ. ಇವರಿಗೆ ಯಾವುದೇ ಔಷಧ ಇಲ್ಲದ ಹಿನ್ನೆಲೆ ಸಾವಿನ ಸಂಖ್ಯೆ ಹೆಚ್ಚಿದೆ ಎಂದು ವೈದ್ಯ ಡಾ. ಉಮೇಶ ಹಳ್ಳಿಕೇರಿ ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಘಟಕ, ರುಡ್ ಸೆಟ್ ಸಂಸ್ಥೆಯ ಸಹಯೋಗದಲ್ಲಿ ರುಡ್ ಸೆಟ್‌ನ ಆವರಣದಲ್ಲಿ ಬುಧವಾರ ಹಮ್ಮಿಕೊಂಡ ಪ್ಲಾಸ್ಮಾ ದಾನದ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಕೊರೋನಾ ಸೋಂಕಿಗೆ ತುತ್ತಾಗಿ ಉಸಿರಾಟದ ತೊಂದರೆಯಿAದ ಬಳಲುವಂತಹ ರೋಗಿಗಳನ್ನು ಉಳಿಸಲು ಪ್ಲಾಸ್ಮಾ ಚಿಕಿತ್ಸೆಯೊಂದೇ ಮಾರ್ಗವಾಗಿದೆ ಎಂದು ತಿಳಿಸಿದರು.

ಸೋಂಕಿನಿoದ ಗುಣವಾದವರಿಂದ ಪಡೆದ ಪ್ಲಾಸ್ಮಾವನ್ನು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ವರ್ಗಾವಣೆ ಮಾಡುವುದೇ ಪ್ಲಾಸ್ಮಾ ಚಿಕಿತ್ಸೆ. ಇದರಿಂದ ಅವರಲ್ಲಿ ವೈರಾಣುವಿನ ವಿರುದ್ಧ ಹೋರಾಡುವ ಶಕ್ತಿ ವೃದ್ಧಿಸುತ್ತದೆ. ಧಾರವಾಡದಲ್ಲಿ ನವನಗರದ ಕ್ಯಾನ್ಸರ್ ಆಸ್ಪತ್ರೆಯಲ್ಲಿಯೇ ಈಗಾಗಲೇ ೩೫ಕ್ಕೂ ಹೆಚ್ಚು ಜನರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿ, ಪ್ರಾಣಾಪಾಯದಿಂದ ಕಾಪಾಡಿದೆ ಎಂದು ಹೇಳಿದರು.

ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಕವನ ದೇಶಪಾಂಡೆ, ಕೊರೋನಾ ಸೋಂಕಿನಿoದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಬಹುದು. ಇವರು ೧೮-೬೦ ವರ್ಷದ ಒಳಗಿರಬೇಕು. ತೂಕ ೫೦ ಕೆ.ಜಿಗಿಂತ ಹೆಚ್ಚಿರಬೇಕು. ಆಸ್ಪತ್ರೆಯಿಂದ ಗುಣಮುಖರಾಗಿ ೧೪ ದಿನಗಳಲ್ಲಿ ರಕ್ತ ನೀಡಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ.ಧೀರಜ ವೀರನಗೌಡರ, ಮಾಹಾಂತೇಶ ವೀರಾಪೂರ, ಸುನೀಲ ಬಾಗೇವಾಡಿ, ಸಂಜಯ ಕಬ್ಬೂರ, ಮಾರ್ತಾಂಡಪ್ಪ ಕತ್ತಿ, ಮಹೇಶ ಗೌಡರ, ರಾಜೇಂದ್ರ ಮಂಡೆದ ಮತ್ತು ರುಡ್ ಸೆಟ್‌ನ ಸಿಬ್ಬಂದಿ ಮತ್ತು ಕಾರ್ಮಿಕರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss