Sunday, June 26, 2022

Latest Posts

ಫರಿದಾಬಾದ್‌ನಲ್ಲಿ ಯುವತಿ ಶೂಟೌಟ್: ಕೊಲೆಗೆ ಮತಾಂತರ ಕಾರಣ?

ಚಂಢೀಗಡ: ಹರಿಯಾಣದ ಫರಿದಾಬಾದ್‌ನಲ್ಲಿ ಕಾಲೇಜಿನ ಮುಂದೆ ಯುವತಿ ಶೂಟೌಟ್ ಪ್ರಕರಣಕ್ಕೆ ಮತಾಂತರದ ಶಂಕೆ ವ್ಯಕ್ತವಾಗಿದೆ.
ಕಾಲೇಜಿನಿಂದ ಹೊರಬರುತ್ತಿದ್ದಂತೆ ಯುವತಿಗೆ ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಕಳೆದ ಸೋಮವಾರ ನಡೆದಿತ್ತು. ಆರೋಪಿ ಮುಸ್ಲಿಂ ಆಗಿದ್ದು, ಆತ ಯುವತಿಗೆ ಮತಾಂತರವಾಗಲು ಒತ್ತಡ ಹಾಕಿದ್ದ, ಇದಕ್ಕೆ ಯುವತಿ ವಿರೋಧಿಸಿದ್ದರಿಂದ ಆಕೆಯನ್ನು ಕೊಂದಿದ್ದಾನೆ ಎಂದು ಯುವತಿ ಸಹೋದರ ಆರೋಪಿಸಿದ್ದಾರೆ.
21 ವರ್ಷದ ಯುವತಿ ನಿಖಿತಾ ತೋಮರ್ ಗುಂಡಿಗೆ ಬಲಿಯಾದ ಯುವತಿ, ಆರೋಪಿ ತೌಸೀಫ್ ಹಾಗೂ ಆತನ ಸ್ನೇಹಿತ, ನಿಖಿತಾ ಕಾಲೇಜಿನಿಂದ ಹೊರಬಂದಂತೆ ಆಕೆ ಬಳಿ ಏನೋ ಮಾತನಾಡಿದ್ದಾರೆ. ಆಕೆ ಹೆದರಿ ಹಿಂದೆ ಹಿಂದೆ ಸರಿದಂತೆ ಶೂಟ್ ಮಾಡಿ ಕಾರಿನಲ್ಲಿ ಓಡಿಹೋಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಕೂಡ ರೆಕಾರ್ಡ್ ಆಗಿದೆ.
ಎರಡು ವರ್ಷಗಳಿಂದಲೂ ತೌಸೀಫ್ ಹಾಗೂ ನಿಖಿತಾ ಸ್ನೇಹಿತರಾಗಿದ್ದರು. ಇವರಿಬ್ಬರ ಸ್ನೇಹ ಇದ್ದಕ್ಕಿದ್ದಂತೆ ನಿಂತಿತ್ತು. ಆತ ಇವರ ಮನೆಗೆ ಬರುವುದು, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ಇದಕ್ಕಾಗಿ ನಿಖಿತಾ ಮನೆಯವರು ತೌಸೀಫ್ ಮೇಲೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ತೌಸೀಫ್ ವೈದ್ಯಕೀಯ ಶಿಕ್ಷಣ ಅರ್ಧಕ್ಕೆ ನಿಂತಿತ್ತು. ಈ ದ್ವೇಷ ಹಿನ್ನಲೆಯೂ ಇದೆ. ತೌಸೀಫ್ ಹಾಗೂ ಅವನ ಸ್ನೇಹಿತ ರೇಹಾನ್‌ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ. ಪೊಲೀಸರ ಮಾಹಿತಿ ಅನ್ವಯ ನಿಖಿತಾ ಕಿಡ್ನಾಪ್ ಮಾಡುವ ಇರಾದೆ ಇವರಿಗಿತ್ತು. ಆಕೆ ಅದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಗುಂಡು ಹಾರಿಸಲಾಗಿದೆ. ತಕ್ಷಣ ಆರೋಪಿ ಪರಾರಿಯಾಗಿದ್ದು, ಸ್ಥಳೀಯರು ನಿಖಿತಾಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ನಿಖಿತಾಗೆ ಗಂಭೀರ ಗಾಯವಾಗಿದ್ದು, ಆಕೆ ಬದುಕುಳಿಯಲಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss