Wednesday, August 10, 2022

Latest Posts

ಫಸ್ಟ್ ನ್ಯೂರೋ ಆಸ್ಪತ್ರೆಯ ಲಿಂಕ್: ಬೋಳೂರಿನ ಒಂದೇ ಮನೆಯ ಐವರಿಗೆ ಸೋಂಕು

ಮಂಗಳೂರು: ನಗರದ ಪಡೀಲ್ ನ ಫಸ್ಟ್‌‌ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬೋಳೂರಿನ 58 ವರ್ಷದ ಮಹಿಳೆಯಿಂದ ಒಟ್ಟು 4 ಮಂದಿಗೆ ಸೋಂಕು ಹರಡಿದ್ದು ನಗರದಲ್ಲಿ ಆತಂಕ ಹೆಚ್ಚಿಸಿದೆ. ಬುಧವಾರ ಬೋಳೂರಿನ 38 ವರ್ಷದ ಮಹಿಳೆ ಹಾಗೂ ಆಕೆಯ 11 ವರ್ಷದ ಮಗಳಲ್ಲಿ ಸೋಂಕು ಕಂಡುಬಂದಿದೆ.

ಬೋಳೂರಿನಲ್ಲಿ ಮೊದಲ ಪ್ರಕರಣ ಪತ್ತೆಯಾದ 58 ವರ್ಷದ ಮಹಿಳೆ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು. ಅವರಿಂದ ಆಕೆಯ 63 ವರ್ಷದ ಪತಿ, 38 ವರ್ಷದ ಪುತ್ರಿ, 52 ವರ್ಷದ ಅಳಿಯ ಹಾಗೂ 11 ವರ್ಷದ ಮೊಮ್ಮಗಳಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಒಂದೇ ಕುಟುಂಬದಲ್ಲಿ 5 ಮಂದಿಗೆ ಕೊರೋನಾ ತಟ್ಟಿದ್ದು, ಮನೆ ಮಂದಿಯನ್ನು ಭಯಭೀತಗೊಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss