ಹೊಸದಿಗಂತ ಆನ್ ಲೈನ್ ಡೆಸ್ಕ್:
ಫಿಜರ್-ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಿಡ್ -19 ಲಸಿಕೆ ಬಳಕೆಗೆ ಬ್ರಿಟನ್ ಅನುಮೋದನೆ ನೀಡಿದೆ.
ಮುಂದಿನ ವಾರದ ಆರಂಭದಲ್ಲಿ ಪ್ರಜೆಗಳಿಗೆ ಕೊರೋನಾ ಲಸಿಕೆ ಸಿಗಲಿದ್ದು, ಲಸಿಕೆಯನ್ನು ಹೇಗೆ ಚಲಾವಣೆಗೆ ತರುವುದು ಎಂಬುದರ ಕುರಿತು ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ ಕಾಕ್ ತಿಳಿಸಿದ್ದಾರೆ.
ಬೆಲ್ಜಿಯಂನ ಫಿಜರ್ನ ಉತ್ಪಾದನಾ ಕೇಂದ್ರದಿಂದ 8ಲಕ್ಷ ಡೋಸ್ಗಳನ್ನು ಪಡೆಯಲಿರುವ ಬ್ರಿಟನ್ ಮುಂದಿನ ವಾರದಲ್ಲಿ ಬ್ರಿಟನ್’ನ ಪ್ರಜೆಗಳಿಗೆ ಲಸಿಕೆ ನೀಡಲು ಪ್ರಾರಂಭಿಸುತ್ತದೆ. ಈಗಾಗಲೇ ಬ್ರಿಟನ್ 20 ಮಿಲಿಯನ್ ಲಸಿಕೆಗೆ ಮನವಿ ಮಾಡಿದೆ.
ಈ ಲಸಿಕೆಯು ಕೊರೋನಾ ತಡೆಗೆ ಮುಖ್ಯವಾಗಿದ್ದು, ವಿಶ್ವದ ಮೊದಲ ಕೊರೋನಾ ಲಸಿಕೆಯಾಗಿದೆ ಎನ್ನಲಾಗಿದೆ.