Wednesday, July 6, 2022

Latest Posts

ಫುಡ್ ಪಾಂಡಾದ ಡೆಲಿವರಿ ಬಾಯ್ ಬೈಕಲ್ಲಿ ಕಾಣಿಸಿಕೊಂಡಿತಾ ರಿಯಲ್ ಪಾಂಡಾ??!!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮುದ್ದು ಮುದ್ದಾಗಿರುವ ಪ್ರಾಣಿ ಪಾಂಡಾ ಅಂದ್ರೆ ಯಾರಿಗೆ ಇಷ್ಟಾ ಆಗೊದಿಲ್ಲ ಹೇಳಿ? ಎಷ್ಟೋ ಜನರು ಜೀವನದಲ್ಲಿ ಒಮ್ಮೆಯಾದ್ರೂ ಪಾಂಡಾವನ್ನಾ ಕಣ್ಣಾರೆ ನೋಡಬೇಕು, ಮುಟ್ಟ ಬೇಕು ಅಂಥ ಆಸೆ ಇಟ್ಟಕೊಂಡಿರುತ್ತಾರೆ. ಆದರೆ ಇಲ್ಲೊಬ್ಬ ಭೂಪ ಪಾಂಡಾ ಜೊತೆ ಜಾಲಿ ರೈಡೇ ಹೋಗಿದ್ದಾನೆ.

ಹೌದು.. ಈ ಅಪರೂಪದ ಘಟನೆ ನಡೆದಿರುವುದು ಮಲೇಷ್ಯಾದಲ್ಲಿ. ಆನ್ ಲೈನ್ ಫುಡ್ ಡೆಲಿವರಿ ಕಂಪನಿ ಫುಡ್‌ ಪಾಂಡಾದಲ್ಲಿ ಕೆಲಸ ಮಾಡುತ್ತಿದ್ದ ಉಜೈರ್ (22) ಕೆಲಸದ ಕೊನೆಯ ದಿನದಂದು ತನ್ನೊಂದಿಗೆ ಪಾಂಡಾ ಒಂದನ್ನು ಬೈಕ್ ಹಿಂದೆ ಕೂರಿಸಿಕೊಂಡು ಹೋಗಿದ್ದಾನೆ. ತನ್ನ ಹಾಗೂ ಪಾಂಡಾ ಬೈಕ್‌ ರೈಡಿಂಗ್‌ನ ಚಿತ್ರವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾನೆ. “ನನ್ನ ಕೆಲಸದ ಕೊನೆಯ ದಿನ  ಈ ಸೋಮಾರಿ ಹುಡುಗನನ್ನು ಕೂಡ ನನ್ನ ಜೊತೆ ಕರೆತಂದೆ” ಎಂದು ಬರೆದುಕೊಂಡಿದ್ದಾನೆ.

ಇದೀಗ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆ ಪಡೆದಿದೆ. “ನಿಜವಾಗಲೂ ಈತ ಪಾಂಡಾವನ್ನು ಬೈಕ್’ಲ್ಲಿ ಕೂರಿಸಿಕೊಂಡಿದ್ದಾನಾ” ಎಂಬ ಪ್ರಶ್ನೆ ಕಾಡತಿರಬಹುದು ಅಲ್ವಾ? ಅಸಲಿ ಕಥೆ ಏನು ಅಂದ್ರೆ ಈ ಕಿಲಾಡಿ ಉಜೈರ್  ಪಾಂಡಾವನ್ನು ತನ್ನ ಬೈಕ್ ನ ಹಿಂದೆ ಕೂರಿಸಿಕೊಂಡಿಲ್ಲ. ಬದಲಾಗಿ ತನ್ನ ಬೈಕ್ ನ ಹಿಂದೆ ಪಾಂಡಾ ಕುಳಿತಿರುವ ಹಾಗೆ ಫೋಟೋಗಳನ್ನು ಎಡಿಟ್ ಮಾಡಿದ್ದಾನೆ.

ಛಾಯಾಗ್ರಾಹಕ ಮತ್ತು ಗ್ರಾಫಿಕ್ ಡಿಸೈನರ್ ಕೂಡ ಆಗಿರುವ ಉಜೈರ್, “ನಾನು ಛಾಯಾಗ್ರಾಹಕನಾಗಿದ್ದು,  ಫೋಟೋ ಎಡಿಟ್ ಮಾಡುವ ಕೌಶಲ್ಯತೆ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.  ನಾನು ಫುಡ್ ಪಾಂಡಾದಲ್ಲಿ ಕೆಲಸ ಮಾಡುತ್ತಿದ್ದೆ. ಅಧ್ಯಯನವನ್ನು ಮುಂದುವರೆಸಬೇಕಾಗಿರುವ ಕಾರಣ ನನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ.  ಕೆಲಸದ ಕೊನೆಯ ದಿನವನ್ನು ಫುಡ್‌ಪಾಂಡಾದೊಂದಿಗೆ ಅವಿಸ್ಮರಣೀಯವಾಗಿಸಲು ನನ್ನ ಬೈಕ್ ಹಿಂದೆ ಪಾಂಡಾ ಕುಳಿತಿರುವ ಹಾಗೆ ಫೋಟೋಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದೇನೆ” ಎಂದು ಉಜೈರ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss