ಹೊಸ ದಿಗಂತ ಆನ್ ಲೈನ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನ ನಗರದ ವಿದೇಶಿ ಅಂಚೆ ಕಚೇರಿಯ ಕಸ್ಟಮ್ಸ್ ಕಮಿಷನರೇಟ್ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಅಕ್ರಮವಾಗಿ ಫ್ರಾನ್ಸ್ನಿಂದ ಸಾಗಾಟ ಮಾಡುತ್ತಿದ್ದ ಎಂಡಿಎಂಎ ಮಾದಕ ದ್ರವ್ಯವನ್ನು ಪತ್ತೆ ಮಾಡಿದ್ದಾರೆ.ಫೂಟ್ ಮಸಾಜರ್ನಲ್ಲಿ ಬಚ್ಟಿಟ್ಟು ಎಂಡಿಎಂಎ ಮಾದಕ ದ್ರವ್ಯ ಕಳ್ಳ ಸಾಗಣಿಕೆ ನಡೆಸಿದ್ದರು.
ವಿದೇಶಿ ಆಂಚೆ ಕಚೇರಿ ಕಸ್ಟಮ್ಸ್ ಕಮಿಷನರೇಟ್ ಅಧಿಕಾರಿಗಳ ಅನುಮಾನದ ಮೇಲೆ ಫ್ರಾನ್ಸ್ ನಿಂದ ಬಂದಿದ್ದ ಪರ್ಸಲ್ ತಪಾಸಣೆ ನಡೆಸಿದ್ದಾಗ 2.345 ಕೆ.ಜಿ ತೂಕದ 1.25 ಕೋಟಿ ರೂ. ಮೌಲ್ಯದ ಎಂಡಿಎಂಎ ಮಾದಕ ದ್ರವ್ಯ ಪತ್ತೆಯಾಗಿದೆ.
ಕಸ್ಟಮ್ಸ್ ಕಮಿಷನರೇಟ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.