Tuesday, August 16, 2022

Latest Posts

ಫೆಬ್ರವರಿಯಲ್ಲಿ ಕೊರೋನಾ ಲಸಿಕೆ ಲಭ್ಯ: ಐಸಿಎಂಆರ್ ವಿಜ್ಞಾನಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತದ ಮೊದಲ ಕೋವಿಡ್ -19 ಲಸಿಕೆ ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಸಿದ್ಧವಾಗುತ್ತದೆ. ಇದರ ಅಂತಿಮ ಹಂತದ ಪ್ರಯೋಗಗಳು ಈ ತಿಂಗಳಿನಿಂದ ಪ್ರಾರಂಭವಾಗುತ್ತವೆ ಎಂದು ವರದಿ ತಿಳಿಸಿದೆ.

ಭಾರತದ ಮೊದಲ ಕೊರೋನಾ ಲಸಿಕೆಯಾದ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ ಕೋವಾಕ್ಸಿನ್ ದೇಶದಲ್ಲಿ ಹಂತ 1 ಮತ್ತು 2 ಪ್ರಯೋಗಗಳಿಗೆ ಒಳಗಾಯಿತು.

ಲಸಿಕೆಯ ಮೂರನೇ ಹಂತದ ಪ್ರಯೋಗವು ಈ ತಿಂಗಳಿನಲ್ಲಿ ದೇಶದಾದ್ಯಂತ 21 ಪ್ರದೇಶಗಳಲ್ಲಿ ಪ್ರಾರಂಭವಾಗಲಿದೆ. ಲಸಿಕೆ ಉತ್ತಮ ಪರಿಣಾಮಕಾರಿಯಾಗಿದೆ ಎಂದು ಐಸಿಎಂಆರ್ ನ ರಜನಿ ಕಾಂತ್ ಹೇಳಿದ್ದಾರೆ.

ಕೊರೋನಾ ಕಾರ್ಯಪಡೆಯ ಸದಸ್ಯರೂ ಆಗಿರುವ ಕಾಂತ್, ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್ ಆರಂಭದ ವೇಳೆಗೆ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದರು.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss