Thursday, February 25, 2021

Latest Posts

ಫೆ. 1ರಂದು ನಡೆಯಬೇಕಿದ್ದ ದೆಹಲಿ ಪಾದಯಾತ್ರೆಯನ್ನು ಮುಂದೂಡಿದ ರೈತ ಸಂಘಟನೆಗಳು

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ದೆಹಲಿ ಪಾದಯಾತ್ರೆಯನ್ನು ರೈತ ಸಂಘಟನೆಗಳು ಮುಂದೂಡಲು ನಿರ್ಧಾರ ಮಾಡಿದೆ.
ನಿನ್ನೆ ರೈತ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದ ಕಾರಣದಿಂದ ಫೆಬ್ರವರಿ 1ರಂದು ನಡೆಯಬೇಕಿದ್ದ ಪಾದಯಾತ್ರೆಯನ್ನು ಮುಂದೂಡಲಾಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)ನ ನಾಯಕ ಬಲ್ಬೀರ್ ಎಸ್.​ ರಾಜೇವಾಲ್ ಸ್ಪಷ್ಟನೆ ನೀಡಿದ್ದಾರೆ.
ರೈತರ ಪ್ರತಿಭಟನೆ ಬದಲಾಗಿ ಹುತಾತ್ಮರ ದಿನದಂದು ದೇಶದಾದ್ಯಂತ ಸಾರ್ವಜನಿಕರ ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದಿರುವ ಬಲ್ಬೀರ್ ಎಸ್.​ ರಾಜೇವಾಲ್ ಫೆಬ್ರವರಿ 1ರಂದು ನಡೆಯಬೇಕಿದ್ದ ಪಾದಯಾತ್ರೆಯನ್ನು ಮುಂದೂಡಲಾಗಿದೆ ಎಂದಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!