ಹೊಸದಿಲ್ಲಿ: ಉದ್ಯಮಿಗಳೊಂದಿಗಿನ ಸಂವಾದ ಕಾರ್ಯಕ್ರಮಕ್ಕಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.16 ಮತ್ತು 17ರಂದು ಹೈದರಾಬಾದ್ ಮತ್ತು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.
2020-21ನೇ ಸಾಲಿನ ಬಜೆಟ್ ವಿಚಾರವಾಗಿ ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಶುಕ್ರವಾರ ವಿತ್ತ ಸಚಿವಾಲಯ ಈ ಕುರಿತು ಮಾಹಿತಿ ನೀಡಿದೆ.
ಎರಡು ಹಂತದ ಸಂವಾದ ನಡೆಯಲಿದ್ದು, ಮೊದಲ ಅವಧಿಯನ್ನು ಸಚಿವರು ವ್ಯಾಪಾರಸ್ಥರೊಂದಿಗೆ, ಕೈಗಾರಿಕೋದ್ಯಮಿಗಳೊಂದಿಗೆ, ಬ್ಯಾಂಕ್ ಹೂಡಿಕೆದಾರರೊಂದಿಗೆ ಮತ್ತು ರೈತ ಸಂಘಗಳೊಂದಿಗೆ ನಡೆಸಲಿದ್ದಾರೆ. ಎರಡನೇ ಅವಧಿಯ ಸಂವಾದ ಅರ್ಥಶಾಸ್ತ್ರಜ್ಞರೊಂದಿಗೆ ತೆರಿಗೆ ಪರಿಣಿತರೊಂದಿಗೆ ನಡೆಯಲಿದೆ.