Sunday, June 26, 2022

Latest Posts

ಫೆ.21 ರಿಂದ 24 ರವರೆಗೆ ಟ್ರಂಪ್ ಭಾರತ ಭೇಟಿ

ಹೊಸದಿಲ್ಲಿ: ಭಾರತಕ್ಕೆ ಫೆ.21 ರಿಂದ 24 ರವರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡುವ ಸಾಧ್ಯತೆ ಇದೆ.

ಫೆ.24 ರಿಂದ ಮಾ.20ರವರೆಗೆ ನಡೆಯುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿ ಸಭೆಯಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಹರಿಹಾಯಲು ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಭೇಟಿ ಭಾರತಕ್ಕೆ ಮಹತ್ವದಾಗಿದೆ.

ಈ ಭೇಟಿ ವೇಳೆ ವಿಶ್ವಸಂಸ್ಥೆಯಲ್ಲಿ ಚರ್ಚೆಗೆ ಬರುವ ವಿಷಯಗಳು, ರಕ್ಷಣಾ ಒಪ್ಪಂದ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಉಭಯ ದೇಶಗಳ ನಾಯಕರು ಚರ್ಚಿಸುವ ಸಾಧ್ಯತೆ ಇದೆ.

ಅಹಮದಾಬಾದ್ ನಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ಆದರೆ ಕಾರ್ಯಕ್ರಮ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಅಮೆರಿಕದಿಂದ ಭಾರತ ನೌಕಪಡೆಗೆ ಅಪಾಚೆ ದಾಳಿ ಹೆಲಿಕಾಪ್ಟರ್, ವೈವಿಧ್ಯಮಯ ಕಾರ್ಯನಿರ್ವಹಣೆಯ ಪಿ81 ವಿಮಾನ ಖರೀದಿ, ಪ್ರಿಡೇಟರ್ ಬಿ ಶಸ್ತ್ರಸಜ್ಜಿತ ಡ್ರೋಣ್ ಖರೀದಿ ಮಾಡಲು ಉತ್ಸುಕವಾಗಿದೆ. ಟ್ರಂಪ್ ಭೇಟಿ ವೇಳೆ ಅಮೆರಿಕದ ರಕ್ಷಣಾ ಗುತ್ತಿಗೆದಾರರ ಜೊತೆಗೆ ಈ ಕುರಿತು ಮಾತುಕತೆ ನಡೆಯುವ ನಿರೀಕ್ಷೆ ಇದೆ.

ಮಾನವ ಹಕ್ಕು ಮಂಡಳಿ ಸಭೆಯಲ್ಲಿ ಪಾಕಿಸ್ತಾನವು ಭಾರತ ಇತ್ತೀಚಿಗೆ ಜಾರಿಗೊಳಿಸಿದ ಕಾಶ್ಮೀರಕ್ಕೆ ವಿಶೇಷ ಅಧಿಕಾರದ ಸಂವಿಧಾನದ 370ನೇ ತಿದ್ದುಪಡಿ ರದ್ದತಿ, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಭಾರತದಲ್ಲಿ ಮುಸ್ಲಿಮರಿಗೆ ರಕ್ಷಣೆ ಇಲ್ಲ ಎಂದು ವಿಶ್ವದ ಎದುರು ಬಿಂಬಿಸುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss