Thursday, August 18, 2022

Latest Posts

ಫೆ.26 ರಿಂದ 28 ರವರೆಗೆ ಜಾನಪದ ಲೋಕೋತ್ಸವ: ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ

ಹೊಸದಿಗಂತ ವರದಿ,ರಾಮನಗರ:

ಫೆ.26 ರಿಂದ 38 ವರೆಗೆ ಮೂರು ದಿನಗಳ ಕಾಲ ಜಾನಪದ ಲೋಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಟಿ.ತಿಮ್ಮೇಗೌಡ ಅವರು ತಿಳಿಸಿದರು.

ಜಾನಪದ ಲೋಕದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ವಯ ಜಾನಪದ ಲೋಕದ ಕಾರ್ಯಕ್ರಮಗಳನ್ನು ಕೆಳ ತಿಂಗಳ ಮೊಟಕುಗೊಳಿಸಲಾಗಿತ್ತು. ಇದೀಗ ಸರ್ಕಾರದ ಆದೇಶಗಳಿಗೊಳಪಟ್ಟು ಎಲ್ಲಾ ಜಾನಪದ ಕಾರ್ಯ ಚಟುವಟಿಕೆಗಳು ಪುನರಾರಂಭಗೊಳ್ಳಲಿದೆ.

ಸ್ಥಗಿತಗೊಂಡಿದ್ದ ಲೋಕಸಿರಿ ಕಾರ್ಯಕ್ರಮ ಮತ್ತೆ ಪ್ರಾರಂಭವಾಗಿದೆ. ಜನಪದ ಕಲೆಗಳ ತರಬೇತಿ, ಪ್ರದರ್ಶನ, ರಂಗಕಲಾ ಪ್ರದರ್ಶನ, ಗೀತಗಾಯನ, ಗ್ರಾಮೀಣ ಕ್ರೀಡಾ ಉತ್ಸವ, ಗಾಳಿಪಟ ಉತ್ಸವ ದಸರಾ ಉತ್ಸವ ಸೇರಿದಂತೆ ಎಲ್ಲಾ ಜನಪದ ಕಾರ್ಯಕ್ರಮಗಳು ಎಂದಿನoತೆ ಮುಂದುವರೆಯಲಿದೆ ಎಂದು ತಿಳಿಸಿದರು.

ಇತ್ತೀಚಿಗೆ ವೀಕ್ಷಕರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಅಲ್ಲದೆ ನೂತನವಾಗಿ ಮಹಿಳಾ ಕೊರವಂಜಿ, ಭೂತಾರಾಧನೆ, ಪುರುವಂತಿಕೆ ಹೂವಿನ ಕರಗ, ಹಸಿಕರಗ, ಮೊಸಳೆಗಳು, ಚಿರತೆ, ನವಿಲು ಸೇರಿದಂತೆ 10 ಜನಪದ ಪ್ರತಿಕೃತಿಗಳನ್ನು ರಚಿಸಲಾಗಿದ್ದು, ಪ್ರವಾಸಿಗರನ್ನು ಆಕರ್ಷಿಸಲಿದೆ. ಕಡ್ಡಾಯವಾಗಿ ಮಾಸ್ಕ್ ಬಳಕೆ, ಸ್ಯಾನಿಟೈಸರ್ ಬಳಸಲಾಗುತ್ತಿದ್ದು ವೀಕ್ಷಕರ ಸುರಕ್ಷತೆಗೂ ಆದ್ಯತೆ ನೀಡಲಾಗುತ್ತಿದೆ ಎಂದು ವಿವರಿಸಿದರು. ಈ ಬಾರಿ ಕೆಂಗಲ್‌ನಲ್ಲಿ ರಾಸುಗಳ ಜಾತ್ರೆ ರದ್ದಾಗಿರುವ ಕಾರಣ ಇಲ್ಲೂ ಸಹ ಈ ಬಾರಿ ಸಂಕ್ರಾತಿ ಉತ್ಸವವನ್ನು ಮಾಡಲಾಗುತ್ತಿಲ್ಲ ಎಂದರು.

ಈ ವೇಳೆ ಚನ್ನಪಟ್ಟಣ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಣ್ಣ, ಸಿಂ.ಲಿo.ನಾಗರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!