spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಫೆ.7ರಂದು ತಮಿಳುನಾಡಿಗೆ ಮರಳಲಿರುವ ಶಶಿಕಲಾ ನಟರಾಜನ್

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 4 ವರ್ಷ ಜೈಲು ಶಿಕ್ಷೆ ಮುಗಿಸಿ ಎಐಎಡಿಎಂಕೆ ಉಚ್ಚಾಟಿತ ನಾಯಕಿ, ಮಾಜಿ ಸಿಎಂ ದಿ. ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಫೆ.7ರಂದು ತಮಿಳುನಾಡಿಗೆ ಮರಳಲಿದ್ದಾರೆ. ಆದರೆ ಅವರು ತಮಿಳುನಾಡಿಗೆ ಮರಳುತ್ತಿರುವ ಸಂಗತಿ ರಾಜ್ಯ ರಾಜಕೀಯದ ಚಿತ್ರಣ ಬದಲಿಸುವಂತೆ ಕಾಣುತ್ತಿದೆ.

ಭರ್ಜರಿ ಸಿದ್ಧತೆ
ಶಶಿಕಲಾ ಅವರು ಬಿಡುಗಡೆಯಾಗುತ್ತಿದ್ದಂತೆ, ಅವರನ್ನು ಅದ್ಧೂರಿಯಾಗಿ ಸ್ವಾಗತಿಸಬೇಕೆಂದು ಶಶಿಕಲಾ ಪರ ಕಾರ್ಯಕರ್ತರು ತಮಿಳುನಾಡಿನಲ್ಲಿ ಕೆಲವು ತಿಂಗಳ ಹಿಂದೆ ಭಾರೀ ಸಿದ್ಧತೆಗಳ ಮಾಡಿಕೊಂಡಿತ್ತು. ಇದೀಗ ಫೆ.7ರಂದು ಅವರು ಮರಳಲಿದ್ದು, ಭರ್ಜರಿ ಸಿದ್ಧತೆಗಳ ಮಾಡಿಕೊಳ್ಳಲಾಗಿದೆ.
ಮೂಲಗಳ ಪ್ರಕಾರ ಫೆ.7ರಂದು ತಮಿಳುನಾಡಿಗೆ ಪ್ರಯಾಣ ಬೆಳೆಸಲಿರುವ ಶಶಿಕಲಾ ನಟರಾಜನ್ ಮೊದಲು ಚೆನ್ನೈನಲ್ಲಿನ ಜಯಲಲಿತಾ ಅವರ ಸ್ಮಾರಕಕ್ಕೆ ಭೇಟಿ ನೀಡಲಿರುವರು ಎನ್ನಲಾಗಿದೆ. ಆದರೆ ಜಯಲಲಿತಾ ಅವರ ಸ್ಮಾರಕ ಮುಚ್ಚಿರುವುದು ಹಲವು ಪ್ರಶ್ನೆಗಳ ಹುಟ್ಟುಹಾಕಿವೆ. ಶಶಿಕಲಾ ಬಿಡುಗಡೆಯಾದ ದಿನವೇ ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಅವರು ಜಯಲಲಿತಾ ಸ್ಮಾರಕವನ್ನು ಉದ್ಘಾಟನೆ ಮಾಡಿದ್ದರು. ಈಚೆಗೆ ಶಶಿಕಲಾ ಅವರಿಗೆ ಸ್ವಾಗತ ಕೋರಿ ಬ್ಯಾನರ್ ಹಾಕಿದ್ದಕ್ಕೆ ಎಐಎಡಿಎಂಕೆ ಸದಸ್ಯರೊಬ್ಬರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಸಂಗತಿಯೂ ನಡೆದಿತ್ತು. ಈ ಎಲ್ಲಾ ಅಂಶಗಳು ರಾಜ್ಯ ರಾಜಕೀಯದ ಚಿತ್ರಣ ಬದಲಾಗುವುದರ ಮುನ್ಸೂಚನೆ ನೀಡಿದಂತಿವೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss