Sunday, August 14, 2022

Latest Posts

ಫೇಸ್‌ಬುಕ್‌ನಲ್ಲಿ ಮತ್ತೊಂದು ತಿಂಗಳ ಅವಧಿಗೆ ಯುಎಸ್‌ ರಾಜಕೀಯ ಜಾಹೀರಾತು ನಿಷೇಧ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫೇಸ್‌ಬುಕ್‌ನಲ್ಲಿ ರಾಜಕೀಯ ಜಾಹೀರಾತುಗಳಿಗೆ ನಿಷೇಧ ಹೇರಿದ್ದ ಎಫ್‌ಬಿ ಸಂಸ್ಥೆ ಮತ್ತೊಂದು ತಿಂಗಳ ಅವಧಿಗೆ ನಿಷೇಧವನ್ನು ಮುಂದುವರಿಸಿದೆ.
ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದು, ಈ ಹಿನ್ನೆಲೆ ತಮ್ಮ ಜಾಲತಾಣದ ಮೂಲಕ ತಪ್ಪು ಮಾಹಿತಿ ಹರಡ ಬಹುದೆಂಬ ಆತಂಕದಿಂದಾಗಿ ಫೇಸ್‌ಬುಕ್‌ ಸಂಸ್ಥೆ, ಅಮೆರಿಕಾದಲ್ಲಿ ರಾಜಕೀಯ ಜಾಹೀರಾತುಗಳಿಗೆ ಇನ್ನೂ 1 ತಿಂಗಳು ಬ್ರೇಕ್‌ ಹಾಕಿದೆ.
ದೇಶದಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಕುರಿತ ಜಾಹೀರಾತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದು, ಅತಿ ಶೀಘ್ರದಲ್ಲೇ ಯಥಾಸ್ಥಿತಿಗೆ ಬರಲಾಗುವುದು ಎಂದು ಎಫ್‌ಬಿ ಸಂಸ್ಥೆ ಹೇಳಿದೆ.
ಚುನಾವಣಾ ಮುನ್ನ ಜಾಹೀರಾತುಗಳಿಗೆ ನಿಷೇಧ ಹೇರಿದ್ದ ಈ ಸಂಸ್ಥೆ, ಅಮೆರಿಕ ಚುನಾವಣಾ ಪ್ರಕ್ರಿಯೆಯನ್ನು ಫೇಸ್‌ಬುಕ್‌ ಮೂಲಕ ಪ್ರಶ್ನೆ ಮಾಡಿದ್ದವರ ಖಾತೆಗಳನ್ನು ಇದೇ ಅಕ್ಟೋಬರ್‌ನಲ್ಲಿ ರದ್ದು ಮಾಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss