ಹೊಸದಿಗಂತ ಆನ್ಲೈನ್ ಡೆಸ್ಕ್:
ವಾಷಿಂಗ್ಟನ್ ಕ್ಯಾಪಿಟಲ್ ಹೀಲ್ಸ್ನ ಹೊರಗೆ ನಡೆದ ಗಲಭೆಯಿಂದಾಗಿ ಡೊನಾಲ್ಡ್ ಟ್ರಂಪ್ ತಮ್ಮ ಟ್ವಿಟರ್ ಹಾಗೂ ಫೇಸ್ಬುಕ್ ಖಾತೆ ಕಳೆದುಕೊಂಡಿದ್ರು.
ಇದೀಗ ಈ ಸಾಲಿಗೆ ಯೂ ಟ್ಯೂಬ್ ಕೂಡ ಸೇರಿದೆ. ಕಳೆದ ವಾರದಿಂದ ಟ್ರಂಪ್ ಅಧಿಕೃತ ಖಾತೆಯಲ್ಲಿ ಪ್ರಕಟಗೊಂಡ ವಿಡಿಯೋಗಳನ್ನುಯೂ ಟ್ಯೂಬ್ ತಡೆಹಿಡಿದಿದೆ.
ಮಂಗಳವಾರ ಮಧ್ಯರಾತ್ರಿಯಿಂದ ಟ್ರಂಪ್ ಅವರ ಖಾತೆಯಲ್ಲಿ ಯಾವುದೇ ಹೊಸ ವಿಡಿಯೋಗಳನ್ನು ಅಪ್ಲೋಡ್ ಮಾಡಲು ನಿರಾಕರಿಸಲಾಗಿದೆ. ಟ್ರಂಪ್ ಅವರ ಖಾತೆಯನ್ನು ಪರಿಶೀಲಿಸಲಾಗಿ ಅದರಲ್ಲಿ ಪ್ರಕಟಿಸಲಾದ ಒಂದು ವಿಡಿಯೋ ಆಕ್ಷೇಪಾರ್ಹವಾಗಿದ್ದು, ಅದನ್ನು ತೆಗೆದು ಹಾಕಿದ್ದೇವೆ. ಯೂಟೂಬ್ನ ನಿಯಮಾವಳಿಗಳ ಪ್ರಕಾರ ಯಾವುದೇ ಹಿಂಸೆ ಹಾಗೂ ಹಿಂಸೆಯನ್ನು ಪ್ರಚೋದಿಸುವ ವಿಡಿಯೋಗಳನ್ನು ಪ್ರಕಟಿಸುವಂತಿಲ್ಲ. ಹಾಗಾಗಿ ಮುಂದಿನ 7 ದಿನಗಳವರೆಗೆ ಟ್ರಂಪ್ ಅವರ ಖಾತೆಯನ್ನು ಅಮಾನತ್ತಿನಲ್ಲಿಡುವುದಾಗಿ ಯೂಟೂಬ್ ಘೋಷಿಸಿದೆ.