ಹೊಸದಿಗಂತ ಆನ್ಲೈನ್ ಡೆಸ್ಕ್:
ಫೇಸ್ಬುಕ್, ಟ್ವಿಟರ್ ಬೆನ್ನಿಗೇ ಈಗ ಯೂಟ್ಯೂಬ್ ಕೂಡಾ ಟ್ರಂಪ್ನ ರಂಪಾಟಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.
ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಸಂದರ್ಭ ಸಮೀಪಿಸುತ್ತಿದ್ದಂತೆ ಟ್ರಂಪ್ ಪಾಲಿಗಿದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವಾಷಿಂಗ್ಟನ್ನ ಕ್ಯಾಪಿಟಲ್ ಹೀಲ್ಸ್ನ ಹೊರಗೆ ನಡೆದ ಹಿಂಸಾಚಾರದ ಬಳಿಕ ಫೇಸ್ಬುಕ್ ಮತ್ತು ಟ್ವಿಟರ್ ಟ್ರಂಪ್ ಅವರ ಖಾತೆಯನ್ನು ಅಮಾನತುಗೊಳಿಸಿದ್ದವು. ಈ ಯೂ ಟ್ಯೂಬ್ ಕೂಡಾ ಇದೇ ದಾರಿ ಅನುಸರಿಸಿದ್ದು, ಕಳೆದ ಒಂದು ವಾರದಿಂದ ಡೊನಾಲ್ಡ್ ಟ್ರಂಪ್ ಅಧಿಕೃತ ಖಾತೆಯಲ್ಲಿ ಪ್ರಕಟಗೊಂಡಿದ್ದ ವಿಡಿಯೋಗಳನ್ನು ತಡೆಹಿಡಿದಿದೆ. ಇಷ್ಟೇ ಅಲ್ಲ, ಮಂಗಳವಾರ ಮಧ್ಯರಾತ್ರಿಯಿಂದ ಟ್ರಂಪ್ ಅವರ ಖಾತೆಯಲ್ಲಿ ಯಾವುದೇ ಹೊಸ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಕೂಡಾ ನಿರಾಕರಿಸಿದೆ.
ಟ್ರಂಪ್ ಅವರ ಖಾತೆಯಲ್ಲಿರುವ ಒಂದು ವಿಡಿಯೋ ಆಕ್ಷೇಪಾರ್ಹವಾಗಿದೆ. ಅದನ್ನು ತೆಗೆದು ಹಾಕಿದ್ದೇವೆ. ಯೂಟೂಬ್ನ ನಿಯಮಾವಳಿಗಳ ಪ್ರಕಾರ ಯಾವುದೇ ಹಿಂಸೆ, ಹಿಂಸೆಯನ್ನು ಪ್ರಚೋದಿಸುವ ವಿಡಿಯೋಗಳನ್ನು ಪ್ರಕಟಿಸುವಂತಿಲ್ಲ. ಹಾಗಾಗಿ ಮುಂದಿನ 7 ದಿನಗಳವರೆಗೆ ಟ್ರಂಪ್ ಅವರ ಖಾತೆಯನ್ನು ಅಮಾನತ್ತಿನಲ್ಲಿಡುತ್ತಿದ್ದೇವೆ ಎಂದು ಯೂ ಟ್ಯೂಬ್ ಸ್ಪಷ್ಟನೆ ನೀಡಿದೆ.