ಫೇಸ್‌ಬುಕ್ ಬಳಸುವುದಷ್ಟೇ ಅಲ್ಲ, ಅದರ ಬಗ್ಗೆ ತಿಳಿದುಕೊಳ್ಳುವುದೂ ಮುಖ್ಯ: ಇಲ್ಲಿವೆ ಫೇಸ್‌ಬುಕ್ ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ..

0
207

ಈಗೆಲ್ಲಾ ನಿಮ್ಮ ನಂಬರ್ ಕೊಡ್ತೀರಾ ಎಂದು ಕೇಳುವ ಮುನ್ನ ನೀವು ಫೇಸ್‌ಬುಕ್‌ನಲ್ಲಿದ್ದೀರಾ ಎಂದು ಕೇಳುತ್ತೇವೆ. ಫೇಸ್‌ಬುಕ್‌ನಲ್ಲಿ ಖಾತೆ ಇಲ್ಲ ಎಂದವರನ್ನು ಅನುಮಾನದ ದೃಷ್ಟಿಯಲ್ಲಿ ನೋಡ್ತೇವೆ. ಏಕೆಂದರೆ ಫೇಸ್‌ಬುಕ್ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿಹೋಗಿದೆ. ಇದು ಕೇವಲ ಯುವಪೀಳಿಗೆಯ ಅಡಿಕ್ಷನ್ ಮಾತ್ರ ಅಲ್ಲ, ಇಲ್ಲಿ ಎಲ್ಲ ವಯೋಮಾನದವರೂ ಸಮಾನರೇ.. ಜನರ ಬುದ್ಧಿ ಹೇಗಿದೆ, ಅವರು ಯಾವ ರೀತಿ ಮನುಷ್ಯ ಎಂದು ಅಳಿಯಲು ಫೇಸ್‌ಬುಕ್ ಮಾನದಂಡವಾಗಿದೆ. ಅವರ ವಾಲ್‌ನಲ್ಲಿ ಇರುವ ಫೋಟೊಗಳು, ಅವರು ಶೇರ್ ಮಾಡುವ ವಿಷಯಗಳು, ಅವರ ಸ್ನೇಹಿತರು. ಹೀಗೆ ಇವುಗಳಿಂದಲೇ ಅವರ ನಡವಳಿಕೆ ಎಂಥದ್ದು ಎಂದು ಹೇಳಿಬಿಡುತ್ತೇವೆ. ಇಷ್ಟೆಲ್ಲಾ ಉಪಯೋಗಕ್ಕೆ ಬರುವ ನಮ್ಮ ಫೇಸ್‌ಬುಕ್ ಬಗ್ಗೆ ನಿಮಗೆಷ್ಟು ಗೊತ್ತು? ಫೇಸ್‌ಬುಕ್ ನೀವೆಂದೂ ಕೇಳದ ಇಂಟರೆಸ್ಟಿಂಗ್ ವಿಚಾರಗಳನ್ನು ನಾವು ಹೇಳುತ್ತೇವೆ ಕೇಳಿ..

  • ನಾಯಕ ಅಲ್ಪಚೀನೋ ಹೆಸರು ನೀವು ಕೇಳಿದ್ದೀರಾ, ಆದರೆ ಮೊದಲು ಫೇಸ್‌ಬುಕ್ ಹೆಡರ್ ಇಮೇಜ್‌ನಲ್ಲಿ ಇವರ ಫೋಟೊ ಇದ್ದದ್ದು ನಿಮಗೆ ಗೊತ್ತಾ? ಹೌದು ಮೊದಲು ಅಲ್ಪಚೀನೋ ಅವರ ಫೋಟೊ ಫೇಸ್‌ಬುಕ್‌ನ ಹೆಡರ್‌ನಲ್ಲಿ ಇತ್ತು. ತುಂಬ ವರ್ಷಗಳ ಬಳಿಕ ಆ ಫೋಟೊ ತೆಗೆಯಲಾಯಿತು.
  • ಫೇಸ್‌ಬುಕ್‌ನಲ್ಲಿ ಈ ಹಿಂದೆ ವೈರ್‌ಹೊಗ್ ಎಂಬ ಫೀಚರ್ ಬಳಕೆಯಲ್ಲಿತ್ತು, ಇದರಲ್ಲಿ ಫೈಲ್‌ಗಳ ಟ್ರಾನ್ಸ್‌ಫರ್ ಮಾಡಬಹುದಾಗಿತ್ತು. ಹೆಚ್ಚು ಜನ ಫೈಲ್ ಟ್ರಾನ್ಸ್‌ಫರ್‌ಗಾಗಿಯೇ ಫೇಸ್‌ಬುಕ್ ಬಳಸುತ್ತಿದ್ದರು, ಈಗ ಈ ಫೀಚರ್‌ನ್ನು ತೆಗೆದು ಹಾಕಲಾಗಿದೆ.
  • ಮಾರ್ಕ್ ಜುಕರ್‌ಬರ್ಗ್ ಅವರಿಗೆ ಕೆಂಪು ಹಾಗೂ ಹಸಿರು ಬಣ್ಣಗಳು ಕಾಣುತ್ತಿರಲಿಲ್ಲ. ಹಾಗಾಗಿ ಫೇಸ್‌ಬುಕ್‌ನ ಬಣ್ಣ ನೀಲಿಯಾಗಿದೆ. ಅಷ್ಟೇ ಅಲ್ಲದೆ ನೀಲಿ ಬಣ್ಣ ಸುರಕ್ಷತೆಯ ಬಣ್ಣವಾಗಿದೆ. ಈ ಬಣ್ಣದಿಂದ ಜನರಿಗೆ ಫೇಸ್‌ಬುಕ್ ಸುರಕ್ಷಿತ ಎನಿಸಿ ತಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುತ್ತಾರೆ.
  • ಫೇಸ್‌ಬುಕ್‌ನಲ್ಲಿ ಲೈಕ್ಸ್ ಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಪ್ರತಿ ಫೋಟೊ ಮೇಲೂ ಎಷ್ಟು ಲೈಕ್ಸ್ ಬಂದಿವೆ ಎನ್ನುವುದೇ ಜನರ ಚಿಂತೆಯಾಗಿದೆ. ಆದರೆ ಈ ಲೈಕ್ ಬಟನ್ ಹಿಂದೆ ಆಸಮ್ ಬಟನ್ ಆಗಿತ್ತು. ಸುಮಾರು ದಿನಗಳ ನಂತರ ಇದನ್ನು ಲೈಕ್ ಮಾಡಲಾಯಿತು.
  • ಪ್ರತಿ ಸೆಕೆಂಡಿಗೆ ಎಂಟು ಮಂದಿ ಫೇಸ್‌ಬುಕ್‌ಗೆ ಬರುತ್ತಾರೆ. ಅಂದರೆ ೧೫ ನಿಮಿಷಕ್ಕೆ ೭,೨೪೬ ಮಂದಿ ಹೊಸತಾಗಿ ಫೇಸ್‌ಬುಕ್‌ಗೆ ಸೇರ್ಪಡೆಯಾಗುತ್ತಾರೆ.
  • ಸದ್ಯಕ್ಕೆ ಎರಡು ಮಿಲಿಯನ್‌ಗಿಂತ ಹೆಚ್ಚು ಮಂದಿ ಫೇಸ್‌ಬುಕ್ ಬಳಸುತ್ತಾರೆ.
  • ಫೇಸ್‌ಬುಕ್‌ನಲ್ಲಿ ಯಾವ ಸಮಯದಲ್ಲಿ ನೀವು ಏನನ್ನು ಅಪ್‌ಲೋಡ್ ಮಾಡುತ್ತೀರಾ ಎನ್ನುವುದರ ಮೇಲೆ ನಿಮ್ಮ ಲೈಕ್ಸ್‌ಗಳ ಸಂಖ್ಯೆ ನಿಂತಿದೆ. ರಾತ್ರಿ ಹತ್ತರಿಂದ ಹನ್ನೊಂದು ಗಂಟೆ ಸಮಯದಲ್ಲಿ ಅತಿ ಹೆಚ್ಚು ಜನ ಫೇಸ್‌ಬುಕ್ ನೋಡುತ್ತಿರುತ್ತಾರೆ. ಈ ಸಮಯದಲ್ಲಿ ನಿಮ್ಮ ಪೋಸ್ಟ್‌ಗೆ ಹೆಚ್ಚು ಲೈಕ್ಸ್ ಸಿಗುತ್ತದೆ.

LEAVE A REPLY

Please enter your comment!
Please enter your name here