ಹೊಸದಿಗಂತ ಆನ್ಲೈನ್ ಡೆಸ್ಕ್:
ದಯವಿಟ್ಟು ಈ ಬಾರಿ ನನ್ನ ಹುಟ್ಟುಹಬ್ಬಕ್ಕೆ ಮನೆಯ ಬಳಿ ಬರಬೇಡಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿದ್ದಾರೆ.
ಸುಮ್ಮನೆ ದುಡ್ಡು ಖರ್ಚು ಮಾಡಿಕೊಂಡು ಮನೆಯ ಬಳಿ ಏಕೆ ಬರುತ್ತೀರಾ? ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳೋದಿಲ್ಲ. ದಯವಿಟ್ಟು ಬರಬೇಡಿ ಎಂದು ದರ್ಶನ್ ಅಭಿಮಾನಿಗಳನ್ನು ಕೇಳಿಕೊಂಡರು.
ಫೇಸ್ಬುಕ್ ಲೈವ್ ಬರುತ್ತೇನೆ ಎಂದು ಹೇಳಿ ಕುತೂಹಲ ಮೂಡಿಸಿದ್ದ ಡಿಬಾಸ್ ಅಭಿಮಾನಿಗಳಿಗೆ ಮನೆ ಬಳಿ ಬರಬೇಡಿ ಎಂದಿದ್ದಾರೆ. ಕೊರೋನಾ ಸಮಯ, ಈ ಸಂಕಷ್ಟದ ಸಮಯದಲ್ಲಿ ಆಡಂಬರದ ಹುಟ್ಟುಹಬ್ಬ ಮಾಡಿಕೊಳ್ಳಲು ಮನಸಿಲ್ಲ. ನೀವುಗಳು ಎಲ್ಲೆಲ್ಲಿಂದಲೋ ಹುಟ್ಟುಹಬ್ಬ ಆಚರಿಸಲು ಬಂದುಬಿಡುತ್ತೀರಿ. ಈ ಬಾರಿ ಇದು ಆಗುವುದು ಬೇಡ ಎಂದಿದ್ದಾರೆ.