Tuesday, June 28, 2022

Latest Posts

ಫೇಸ್‌ ಬುಕ್‌ ನಲ್ಲಿ ಅಸ್ಪಷ್ಟ ಮಾಹಿತಿಯುಳ್ಳ ಪೋಸ್ಟ್‌ಗಳನ್ನು ಹಾಕುವಂತಿಲ್ಲ: ಮಾರ್ಕ್ ಜುಕರ್‌ಬರ್ಗ್

ಸ್ಯಾನ್ ಫ್ರಾನ್ಸಿಸ್ಕೋ: ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ .
ಹೌದು , ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಫೇಸ್‌ ಬುಕ್‌ ಮಹತ್ವದ ಬದಲಾವಣೆಯನ್ನ ಮಾಡಿದ್ದು, ಇನ್ಮುಂದೆ ಹತ್ಯಾಕಾಂಡವನ್ನ ನಿರಾಕರಿಸುವ ಮತ್ತು ಅಸ್ಪಷ್ಟ ಮಾಹಿತಿಯುಳ್ಳ ಪೋಸ್ಟ್‌ಗಳನ್ನ ಫೇಸ್‌ ಬುಕ್‌ ನಲ್ಲಿ ಹಾಕುವಂತಿಲ್ಲ ಎಂದು ಕಂಪನಿ ಸ್ಪಷ್ಟ ಪಡಿಸಿದೆ.
ಈ ಹೊಸ ಬದಲಾವಣೆಯ ಬಗ್ಗೆ ಮಾತನಾಡಿದ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್, ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಪಿತೂರಿ ಸಿದ್ಧಾಂತಗಳು ಮತ್ತು ತಪ್ಪು ಮಾಹಿತಿಯ ವಿರುದ್ಧ ಕ್ರಮ ಕೈಗೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ಇನ್ನು ಬೇಸಿಗೆಯಲ್ಲಿ ಪ್ರಪಂಚದಾದ್ಯಂತ ಹತ್ಯಾಕಾಂಡದಲ್ಲಿ ಬದುಕುಳಿದವರು ಜುಕರ್‌ಬರ್ಗ್‌ನನ್ನ ಗುರಿಯಾಗಿಸಿಕೊಂಡು ಅಭಿಯಾನಕ್ಕೆ ಧ್ವನಿ ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ಸೈಟ್‌ನಿಂದ ಹತ್ಯಾಕಾಂಡ ನಿರಾಕರಣೆ ಪೋಸ್ಟ್‌ಗಳನ್ನ ತೆಗೆದುಹಾಕಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss