ನವದೆಹಲಿ: ಫೇಸ್ಬುಕ್ ನಲ್ಲಿ ಕೊರೊನಾ ಬಗ್ಗೆ ಸುಳ್ಳು ಸುದ್ದಿಗಳಿಗೆ ಲೈಕ್, ಕಮೆಂಟ್ ಮಾಡಿದರೆ ಹುಷಾರ್!
ಇಂತವರ ವಿರುದ್ದ ಕ್ರಮ ತೆಗೆದುಕೊಳ್ಳಲು ಫೇಸ್ಬುಕ್ ಮುಂದಾಗಿದೆ. ಜಗತ್ತಿಗೇ ಮಾರಕವಾಗಿರುವ ಸುಳ್ಳು ಸುದ್ದಿಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಫೇಸ್ಬುಕ್ ಗಮನಕ್ಕೆ ತಂದಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವು ನ್ಯೂಸ್ ಏಜೆನ್ಸಿಗಳ ಜೊತೆ ಈಗ ಫೇಸ್ಬುಕ್ ಕೈ ಜೋಡಿಸಿದೆ. ಸತ್ಯವಲ್ಲದ ಸುದ್ದಿಗಳ ಬಗ್ಗೆ ಜಾಗೃತಿ ಮೂಡಿಸುವುದು, ಅನಗತ್ಯ ಸುಳ್ಳು ಮಾಹಿತಿಯನ್ನು ಶೇರ್ ಮಾಡುವುದು, ಲೈಕ್, ಕಾಮೆಂಟ್ ಮಾಡುವರಿಗೆ ಇನ್ಮುಂದೆ ಎಚ್ಚರಿಕೆ ನೀಡುವ ಕೆಲಸ ಫೇಸ್ಬುಕ್ ಮಾಡಲಿದೆ. ಪೋಸ್ಟ್ ಗಳ ಬಗ್ಗೆ ಫ್ಯಾಕ್ಟ್ ಚೆಕ್, ನ್ಯೂಸ್ ಫೀಡ್ ಬಳಕೆದಾರರಿಗೆ ಸಿಗಲಿದ್ದು, ಮುಂದಿನ ವಾರದಿಂದ ಈ ಪ್ರಕ್ರಿಯೆ ಆರಂಭವಾಗಲಿದೆ.
ಮುಂದಿನ ವಾರದಿಂದ ನಿಮ್ಮನ್ನು ಎಚ್ಚರಿಸಲಿದೆ ಫೇಸ್ಬುಕ್
ಕೊರೊನಾ ವೈರಸ್ ಔಷಧಿ ಲಭ್ಯ, ಗುಣಪಡಿಸುವ ಭರವಸೆಯ ಜಾಹೀರಾತು, ವೈರಸ್ ಉಗಮದ ಬಗೆಗೆ ತಪ್ಪು ಮಾಹಿತಿ, ಕೊರೊನಾ ವೈರಸ್ ಸಂಬಂಧಿಸಿದ ವದಂತಿ, ಕೊರೊನಾ ಹೆಸರಿನಲ್ಲಿ ನಕಲಿ ವಸ್ತುಗಳ ಮಾರಾಟಕ್ಕೆ ಯತ್ನ ವ್ಯಾಪಕವಾಗುತಿದ್ದು, ಈ ರೀತಿಯ ಸುಳ್ಳು ಮಾಹಿತಿ ಮತ್ತು ವಿಡಿಯೋ ಲಕ್ಷಾಂತರ ವಿವ್ಯೂ ಮತ್ತು ಶೇರ್ ಗಳನ್ನು ಪಡೆದುಕೊಳ್ಳುತ್ತಿದೆ. ಹೀಗಾಗಿ ಹೀಗೆ ತಪ್ಪು ಮಾಹಿತಿ ಶೇರ್, ಕಾಮೆಂಟ್ ಮಾಡಿದ್ದಲ್ಲಿ ಫೇಸ್ಬುಕ್ ಮುಂದಿನ ವಾರದಿಂದ ನಿಮ್ಮನ್ನು ಎಚ್ಚರಿಸಲಿದೆ.