spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಫೇಸ್ ಬುಕ್ ನಿಂದ ಬಿಡುಗಡೆಯಾಯ್ತು ಬಹುನಿರೀಕ್ಷಿತ ‘ಸ್ಮಾರ್ಟ್ ಗ್ಲಾಸ್’: ಇದರ ವಿಶೇಷತೆ ಏನು ಗೊತ್ತಾ?

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಗ್ಯಾಡ್ಜೆಟ್ಸ್ ಪ್ರಪಂಚಕ್ಕೆ ಫೇಸ್ ಬುಕ್ ತನ್ನ ಬಹು ನಿರೀಕ್ಷಿತ ಸ್ಮಾರ್ಟ್ ಗ್ಲಾಸ್ ಅನ್ನು ಕೊಡಗೆಯಾಗಿ ನೀಡಿದ್ದು, ರೇ-ಬನ್ ಸಹಭಾಗಿತ್ವದಲ್ಲಿ ಫೈಸ್ ಬುಕ್ ತನ್ನ ಮೊದಲ ಸ್ಮಾರ್ಟ್ ಗ್ಲಾಸ್ ಬಿಡುಗಡೆ ಮಾಡಿದೆ.
ಈ ಸ್ಮಾರ್ಟ್ ಗ್ಲಾಸ್ ನಲ್ಲಿ ರೇ-ಬನ್ ತನ್ನ ಕ್ಲಾಸಿಕ್ ಗ್ಲಾಸ್ ನ ಫ್ರೇಮ್ ಕೂಡ ಒಳಗೊಂಡಿದೆ. ಈ ಸ್ಮಾರ್ಟ್ ಗ್ಲಾಸ್ ನಲ್ಲಿ ಅದ್ಭುತ ಗ್ರಾಫಿಕ್ಸ್ ಹಾಗೂ ರೆಸಲ್ಯೂಷನ್ ಗಳನ್ನೊಳಗೊಂಡಿದೆ.

Facebook glasses Rayban

ಏನಿದೆ ಈ ಸ್ಮಾರ್ಟ್ ಗ್ಲಾಸ್ ನಲ್ಲಿ? ಕ್ಲಾಸಿಕ್ ಲುಕ್ ಹೊಂದಿರುವ ಈ ಗ್ಲಾಸ್ ನಲ್ಲಿ ವಾಯ್ಸ್ ಅಸಿಸ್ಟೆಂಟ್ ಇದೆ. ಜೊತೆಗೆ ಹೈ ರೆಸಲ್ಯೂಷನ್ ಫೋಟೋ, ವಿಡಿಯೋ ತೆಗೆಯಬಹುದಾಗಿದೆ. ಇದರಲ್ಲಿ ಹಾಡು ಕೇಳುವುದರ ಜೊತೆಗೆ ಕರೆಗಳನ್ನೂ ಉತ್ತರಿಸಬಹುದಾದ ಡಿಜಿಟಲ್ ತಂತ್ರಜ್ಞಾನ ಅಳವಡಿಸಲಾಗಿದೆ.

Facebook glasses Rayban

ಸ್ಮಾರ್ಟ್ ಫೀಚರ್: ಡ್ಯುವಲ್ 5 ಎಂಪಿ ಕ್ಯಾಮೆರಾ ಸೆನ್ಸರ್, 5.0 ಬ್ಲೂಟೂತ್, ವೈಫೈ, ಬ್ಯಾಟರಿ, 500 ಫೋಟೋ ಸ್ಟೋರ್ ಮಾಡಲು ಆಗುವಷ್ಟು ಸ್ಟೋರೇಜ್ ಕೂಡ ಇದೆ.
ಮುಂದಿನ ದಿನಗಳಲ್ಲಿ ಈ ಗ್ಲಾಸ್ ಎಆರ್ ಫೀಚರ್ ನೊಂದಿಗೆ ಹೊರಬರಲಿದ್ದು, ಇದರ ಕಡೆ ನಾವು ಹೆಚ್ಚು ಗಮನಹರಿಸುತ್ತಿದ್ದೇವೆ ಎಂದು ಫೇಸ್ಬುಕ್ ನ ಪ್ರಾಡಕ್ಟ್ ನಿರ್ದೇಶಕಿ ಮೋನಿಶಾ ಪರ್ಕಾಶ್ ತಿಳಿಸಿದರು.

ಬಳಸೋದು ಹೇಗೆ? ಈ ಸ್ಮಾರ್ಟ್ ಗ್ಲಾಸ್ ನಲ್ಲಿನ ಬಲ ಬಾಗದ ಬಟನ್ ಅನ್ನು ಪ್ರೆಸ್ ಮಾಡಿ ಹಿಡಿಯುವುದರಿಂದ ಫೋಟೋ ಕ್ಲಿಕ್ ಮಾಡಬಹುದು. ಹಾಗೆ ಪ್ರೆಸ್ ಮಾಡಿ ಬಿಡುವ ಮೂಲಕ 30 ಸೆಕೆಂಡ್ ಗಳ ವೀಡಿಯೋ ರೆಕಾರ್ಡ್ ಆಗಲಿದೆ.
ಹಾಡು ಅಥವಾ ಕರೆಗಳಲ್ಲಿನ ವಾಲ್ಯೂಮ್ ಸರಿಮಾಡಲು, ಹಾಡು ನಿಲ್ಲಿಸಲು, ಸ್ಕಿಪ್ ಮಾಡಲು ಸ್ವೈಪ್ ಬಟನ್ ಇದೆ. ಕರೆಗಳನ್ನು ಉತ್ತರಿಸಲು, ಕಟ್ ಮಾಡಲು ಎರಡು ಬಾರಿ ಟ್ಯಾಪ್ ಮಾಡಬೇಕು.

Ray-Ban Stories: Features and Price of Facebook Ray-Ban Smart Glasses

ಸದ್ಯ ಈ ಹೊಸ ಸ್ಮಾರ್ಟ್ ಗ್ಲಾಸ್ ಸೆ.9ರಂದು ಬಿಡುಗೆಡೆಯಾಗಿದ್ದು, ಫೇಸ್ ಬುಕ್ ನ ಹಾರ್ಡ್‌ವೇರ್ ವಿಭಾಗವು ಆಕ್ಯುಲಸ್ ವಿಆರ್ ಹೆಡ್‌ಸೆಟ್‌ಗಳು ಮತ್ತು ಪೋರ್ಟಲ್ ವೀಡಿಯೋ-ಚಾಟ್ ಸಾಧನಗಳನ್ನು ಸಹ ಮಾರಾಟ ಮಾಡುತ್ತದೆ, ಮತ್ತು ಈ ವರ್ಷದ ಕೊನೆಯಲ್ಲಿ ಆಕ್ಯುಲಸ್ ಉತ್ಪನ್ನಗಳಿಗೆ ಎಆರ್ ವೈಶಿಷ್ಟ್ಯಗಳನ್ನು ಸೇರಿಸಲು ಯೋಜಿಸುತ್ತಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss