Tuesday, June 28, 2022

Latest Posts

ಫೈಜರ್​ ಲಸಿಕೆ ಪಡೆದ 12 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕೊರೋನಾ ಪಾಸಿಟಿವ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಸ್ರೇಲ್​ನಲ್ಲಿ ಫೈಜರ್​ ಲಸಿಕೆ ಪಡೆದ 12,400ಕ್ಕೂ ಹೆಚ್ಚು ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಕೊರೋನಾ ಲಸಿಕೆ ಪಡೆದ 1.89 ಲಕ್ಷ ಜನರಿಗೆ ಮತ್ತೊಮ್ಮೆ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಶೇ. 6.6 ಜನರಿಗೆ ಸೋಂಕು ದೃಢವಾಗಿದೆ. ಫೈಜರ್​ ಲಸಿಕೆಯ ಎರಡನೇ ಡೋಸೇಜ್​ನ್ನು ಪಡೆದಿದ್ದ 69 ಮಂದಿಯಲ್ಲೂ ಸೋಂಕು ಕಾಣಿಸಿಕೊಂಡಿದೆ.
ಇಸ್ರೇಲ್​ನಲ್ಲಿ ಡಿಸೆಂಬರ್​ 19ರಿಂದ ಫೈಜರ್​ ಲಸಿಕೆ ವಿತರಣೆ ಮಾಡಲಾಗುತ್ತಿದೆ. 90 ಲಕ್ಷ ಜನಸಂಖ್ಯೆಯಲ್ಲಿ ಈಗಾಗಲೇ ಶೇ. 25 ಜನರಿಗೆ ಅಂದರೆ 22 ಲಕ್ಷ ಜನರಿಗೆ ಲಸಿಕೆ ವಿತರಣೆ ಮಾಡಲಾಗಿದೆ. ಶೇ. 3.5 ಜನರಿಗೆ ಲಸಿಕೆಯ ಎರಡನೇ ಡೋಸೇಜ್​ನ್ನೂ ನೀಡಲಾಗಿದೆ.
ಇನ್ನೂ ದೇಶದಲ್ಲಿ ಮೂರನೇ ಹಂತದ ಲಾಕ್​ಡೌನ್​ ಜಾರಿಯಲ್ಲಿದ್ದು, ದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಮತ್ತು 4,005 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss