Wednesday, June 29, 2022

Latest Posts

ಫ್ಯಾಂಟಮ್ ಚಿತ್ರಕ್ಕೆ ಬರುತ್ತಿರುವ ಹೊಸ ಪಾತ್ರದ ಪನ್ನಾ ಯಾರು? ನಾಳೆ ಬರಲಿದ್ದಾನೆ ಆ ಪನ್ನಾ?

ನಟ ’ಕಿಚ್ಚ’ ಸುದೀಪ್ ಹಾಗೂ ನಿರ್ದೇಶಕ ಅನೂಪ್ ‘ಂಡಾರಿ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಫ್ಯಾಂಟಮ್ ಸಿನಿಮಾದ ಶೂಟಿಂಗ್ ಹೈದರಾಬಾದ್ನಲ್ಲಿ ‘ರದಿಂದ  ಸಾಗುತ್ತಿದೆ. ಇತ್ತೀಚಿಗಷ್ಟೆ ಸಿನಿಮಾತಂಡ ಫ್ಯಾಂಟಮ್ ಲೋಕದ ಝಲಕ್ ಅನ್ನು ಅಭಿಮಾನಿಗಳಿಗೆ ತೋರಿಸಿತ್ತು. ಕಿಚ್ಚನ ಹೊಸ ಪ್ರಪಂಚ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಬಳಿಕ ಫ್ಯಾಂಟಮ್ ಲೋಕದ ನಾಯಕ ವಿಕ್ರಾಂತ್ ರೋಣ ಮತ್ತು ಸಂಜು ಪ್ರಾತ್ರವನ್ನು ನಿರ್ದೇಶಕ ಅನೂಪ್ ‘ಭಂಡಾರಿ ಪರಿಚಯ ಮಾಡಿಕೊಟ್ಟಿದ್ದಾರೆ. ಹೌದು, ಫ್ಯಾಂಟಮ್ ಸಿನಿಮಾದಲ್ಲಿ ವಿಕ್ರಾಂತ್ ರೋಣನಾಗಿ ಮಿಂಚುತ್ತಿರುವ ಕಿಚ್ಚ ಸುದೀಪ್ ಸ್ಟ್ ರಿಲೀಸ್ ಮಾಡಲಾಗಿದೆ. ನಂತರ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ನಿರೂಪ್ ‘ಭಂಡಾರಿ ಲುಕ್ ಸಹ ಅನಾವರಣವಾಗಿದೆ

ನಿರೂಪ್ ‘ಭಂಡಾರಿ ಹುಟ್ಟುಹಬ್ಬದಂದು ಸಿನಿಮಾದ ಸ್ಟ್ ಲುಕ್ ರಿಲೀಸ್ ಮಾಡಿ ಸಂಜು ಪಾತ್ರದ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದಾರೆ ನಿರ್ದೇಶಕ ಅನೂಪ್. ಇದೀಗ ಸಿನಿಮಾದ ಮತ್ತೊಂದು ಇಂಟರೆಸ್ಟಿಂಗ್ ಪಾತ್ರ ರಿವೀಲ್ ಆಗುತ್ತಿದೆ. ಈ ಬಗ್ಗೆ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫ್ಯಾಂಟಮ್ ಸಿನಿಮಾದ ಪನ್ನಾ ಪಾತ್ರವನ್ನು ನಾಳೆ ಪರಿಚಯಿಸಲಾಗುತ್ತೆ. ಪಾತ್ರದ ಬಗ್ಗೆ ನಿರ್ದೇಶಕ ಅನೂಪ್ ಹೇಳಲಿದ್ದಾರೆ. ನಾಳೆ ಬೆಳಗ್ಗೆ ೧೦ ಗಂಟೆಗೆ ಸ್ಟ್ ಲುಕ್ ರಿಲೀಸ್ ಆಗುತ್ತಿದೆ. ಫ್ಯಾಂಟಮ್ ಪ್ರಪಂಚಕ್ಕೆ ಸ್ವಾಗತ ಎಂದು ಟ್ವೀಟ್ ಮಾಡಿದ್ದಾರೆ.

ಅಂದ್ಹಾಗೆ ಪನ್ನಾ ಯಾರು ಎನ್ನ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪನ್ನಾ ಪಾತ್ರ ಧಾರಿ ಶ್ರದ್ಧಾ ಅವರೇ ಇರಬಹುದ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಯಾರಿರಬಹುದು ಎಂದು ಕಾತರದಿಂದ ಕಾಯುತ್ತಿದ್ದಾರೆ. ಫ್ಯಾಂಟಮ್ ಮ್ ಲೋಕದ ಪನ್ನಾ ಯಾರು ಎಂದು ತಿಳಿದುಕೊಳ್ಳಬೇಕೆಂದರೆ ನಾಳೆವರೆಗೂ ಕಾಯಲೇಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss