Tuesday, August 16, 2022

Latest Posts

ಫ್ಯಾಂಟಮ್’ ಲೋಕದಲ್ಲಿ ಕ್ರಿಕೆಟ್ ಆಡುತ್ತಿರುವ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಫ್ಯಾಂಟಮ್’ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ’ ಫ್ಯಾಂಟಮ್’’ ತಂಡ ಸದ್ಯ ಹೈದರಾಬಾದ್ ನಲ್ಲಿ ಬೀಡುಬಿಟ್ಟಿದೆ. ಲಾಕ್ ಡೌನ್ ಬಳಿಕ ಸತತ ಚಿತ್ರೀಕರಣದಲ್ಲಿ ನಿರತರಾಗಿರುವ ಸುದೀಪ್ ಮತ್ತು ತಂಡ ಭಾನುವಾರ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಜಾಲಿ ಮೂಡ್ ಹೋಗಿದ್ದರು. ಹೌದು, ಚಿಕ್ಕ ಬ್ರೇಕ್ ನಲ್ಲಿ ಸುದೀಪ್ ತಂಡದ ಜೊತೆ ಕ್ರಿಕೆಟ್ ಆಡಿ ಎಂಜಾಯ್ ಮಾಡಿದ್ದಾರೆ. ಶೂಟಿಂಗ್ ನಿಂದ ಪುಟ್ಟ ವಿರಾಮ ಪಡೆದು ಸುದೀಪ್ ಪ್ರೀತಿಯ ಆಟ ಕ್ರಿಕೆಟ್ ಆಡುವ ಮೂಲಕ ರಿಲ್ಯಾಕ್ಸ್ ಮೂಡ್ ಗೆ ಹೋಗಿದ್ದಾರೆ. ಕಿಚ್ಚ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

 

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss