ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ಕುಟುಂಬದ ಜೊತೆಗಿನ ಸುಂದರ ಕ್ಷಣಗಳ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಅಭಿಮಾನಿಗಳಿಗೆ ಖುಷಿಕೊಟ್ಟಿದ್ದಾರೆ.
ತಂದೆ ರಣಧೀರ್ ಕಪೂರ್, ತಾಯಿ ಬಬಿತಾ ಕಪೂರ್ ಜೊತೆಗೆ ಸಹೋದರಿ ಕರಿಷ್ಮಾ ಕಪೂರ್ ನೊಂದಿಗಿನ ಒಂದು ಸುಂದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಡೀ ಕುಟುಂಬದೊಂದಿಗಿನ ಫೋಟೋಗೆ ‘ನನ್ನ ಜಗತ್ತು’ ಎಂದು ಅಡಿಬರಹವನ್ನೂ ಕೊಟ್ಟಿದ್ದಾರೆ.
ಅದಕ್ಕೂ ಮುನ್ನ ಕರೀನಾ ತಮ್ಮ ಹಿರಿಯ ಮಗ ತೈಮುರ್ ಅಲಿ ಖಾನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದರು.ಇನ್ನೂ ಕರೀನಾ ಸಿನಿಮಾ ಲೈಫ್ ಗೆ ಬಂದರೆ, ಅಮಿರ್ ಖಾತ್ ಜೊತೆಗಿನ ಲಾಲ್ ಸಿಂಗ್ ಚಂದ ಚಿತ್ರದಲ್ಲಿ ಹೆಜ್ಜೆಹಾಕಲಿದ್ದಾರೆ.ಇದರ ನಡುವೆ ಕರೀನಾ ತಮ್ಮ ಎರಡೂ ಪ್ರೆಗ್ನೆನ್ಸಿ ಬಗ್ಗೆ ‘ ಕರೀನಾ ಕಪೂರ್ ಖಾನ್ಸ್ ಪ್ರೆಗ್ನೆನ್ಸಿ ಬೈಬಲ್’ ಎಂಬ ಬುಕ್ ಅನ್ನು ಕೂಡ ರಿಲೀಸ್ ಮಾಡಿದ್ದಾರೆ.