Friday, January 22, 2021

Latest Posts

ಫ್ಯಾಷನ್ ಗೋಲ್ಡ್ ಠೇವಣಿ ವಂಚನೆ: ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಗೆ ಮತ್ತೆ 11 ಪ್ರಕರಣಗಳಲ್ಲಿ ಜಾಮೀನು

ಹೊಸ ದಿಗಂತ ವರದಿ, ಕಾಸರಗೋಡು:

ಫ್ಯಾಷನ್ ಗೋಲ್ಡ್ ಜ್ಯುವೆಲ್ಲರಿ ಹೂಡಿಕೆ ವಂಚನೆ ಪ್ರಕರಣದಲ್ಲಿ ಮಂಜೇಶ್ವರ ಶಾಸಕ, ಮುಸ್ಲಿಂಲೀಗ್ ನೇತಾರ ಹಾಗೂ ಸಂಸ್ಥೆಯ ಚೆಯರ್ ಮೆನ್ ಆಗಿರುವ ಎಂ.ಸಿ.ಖಮರುದ್ದೀನ್ ಗೆ ಗುರುವಾರ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯವು ಮತ್ತೆ 11 ಪ್ರಕರಣಗಳಲ್ಲಿ ಜಾಮೀನು ನೀಡಿದೆ. ಈ ಮೂಲಕ ಈವರೆಗೆ 37 ಪ್ರಕರಣಗಳಲ್ಲಿ ಶಾಸಕರಿಗೆ ಜಾಮೀನು ಲಭಿಸಿದಂತಾಗಿದೆ.
ಆದರೆ ಇತರ ಪ್ರಕರಣಗಳು ಇರುವುದರಿಂದ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ. ಇದೇ ವೇಳೆ ಈ ಮೊದಲು ಮೂರು ಪ್ರಕರಣಗಳಲ್ಲಿ ಕೇರಳ ಹೈಕೋರ್ಟ್ ಜಾಮೀನು ನೀಡಿದ ಬಳಿಕ ಇತರ ಹೆಚ್ಚಿನ ಪ್ರಕರಣಗಳಲ್ಲಿ ಜಾಮೀನು ನೀಡುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಸಲು ಎಂ.ಸಿ.ಖಮರುದ್ದೀನ್ ನಿರ್ಧರಿಸಿದ್ದಾರೆ.
ಈ ಮಧ್ಯೆ ಶಾಸಕರ ಆರೋಗ್ಯ ಸ್ಥಿತಿ ಪರಿಗಣಿಸಿ ಮತ್ತು ಇತರ ಪ್ರಕರಣಗಳಲ್ಲಿ ನೇರ ಭಾಗಿಯಾಗಿರದೆ ಪ್ರತಿವಾದಿಯಲ್ಲದ ಆಧಾರದ ಮೇಲೆ ಹೈಕೋರ್ಟ್ ಈ ಮೊದಲು ಜಾಮೀನು ನೀಡಿತ್ತು. ಹೂಡಿಕೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಮಂಜೇಶ್ವರ ಶಾಸಕರ ವಿರುದ್ಧ ಒಟ್ಟು 149 ಪ್ರಕರಣಗಳು ದಾಖಲಾಗಿದ್ದವು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!