Thursday, March 4, 2021

Latest Posts

ಫ್ರಾನ್ಸ್​ನಿಂದ ಭಾರತಕ್ಕೆ ಬಂದಿಳಿದ 3 ರಫೇಲ್ ಫೈಟರ್​ ಜೆಟ್ಸ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಫ್ರಾನ್ಸ್ ನಿಂದ ಮೂರು ರಫೇಲ್ ಯುದ್ಧವಿಮಾನಗಳು ಭಾರತೀಯ ವಾಯುಸೇನೆಯ ಬೇಸ್​​ಗೆ ಬಂದಿಳಿದಿವೆ. ಈ ರಫೇಲ್ ಯುದ್ಧವಿಮಾನಗಳು ಸುಮಾರು 7000 ಕಿಲೋ ಮೀಟರ್ ದೂರ ಕ್ರಮಿಸಿದ್ದು,ನಾನ್​ಸ್ಟಾಪ್ ಹಾರಾಟ ನಡೆಸಿವೆ.
ಮೂರನೇ ಬ್ಯಾಚ್​ನಲ್ಲಿ ಫ್ರಾನ್ಸ್​ನ ಏರ್​ಬೇಸ್​ ಇಸ್ತ್ರೆಸ್​ನಿಂದ ಭಾರತಕ್ಕೆ ರಫೇಲ್ ಯುದ್ಧವಿಮಾನಗಳು ಬಂದಿಳಿದಿವೆ ಎಂದು ಭಾರತೀಯ ವಾಯುಸೇನೆ ಮಾಹಿತಿ ನೀಡಿದೆ.
ಮಾರ್ಗಮಧ್ಯೆ ಯುಎಇ ಏರ್​ಫೋರ್ಸ್​ ರಫೇಲ್ ಯುದ್ಧವಿಮಾಗಳಿಗೆ ಹಾರಾಟ ನಡೆಸುತ್ತಿದ್ದಂತೆಯೇ ಇಂಧನ ಪೂರೈಕೆ ಮಾಡಿದೆ. ಇಂದು ರಾತ್ರಿ 08: 45 ರ ಸುಮಾರಿಗೆ ರಫೇಲ್​ ವಿಮಾನಗಳು ಬಂದಿಳಿದಿವೆ ಎನ್ನಲಾಗಿದೆ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!