ಪ್ಯಾರಿಸ್: ದೇಶದ ಮೆಡಿಟರೇನಿಯನ್ ಸಿಟಿ ಬಳಿಯ ಚರ್ಚ್ ಬಳಿ ವ್ಯಕ್ತಿಯೊಬ್ಬ ಗುರುವಾರ ಚಾಕುವಿನಿಂದ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ, ಶಿರಚ್ಛೇದನ ನಡೆಸಿದ್ದಾನೆ. ಅಲ್ಲದೇ ದಾಳಿ ತಡೆಯಲು ಬಂದಂತಹ ಇತರ ಇಬ್ಬರ ಮೇಲೂ ಚಾಕುವಿನಿಂದ ದಾಳಿ ನಡೆಸಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ದಾಳಿಯ ಕುರಿತಂತೆ ಫ್ರೆಂಚ್ ಭಯೋತ್ಪಾದನೆ ವಿರೋಧಿ ಅಭಿಯೋಜಕರರು ತನಿಖೆ ಕೈಗೊಂಡಿದ್ದಾರೆ. ಭಯೋತ್ಪಾದನೆಯ ನಂಟಿನ ಕುರಿತಂತೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ನೊಟ್ರೆ ಡೇಮ್ ಚರ್ಚ್ ಬಳಿ ಗುರುವಾರ ಬೆಳಿಗ್ಗೆ ನಡೆದ ದಾಳಿಯ ನಂತರ ಹಲ್ಲೆಕೋರನನ್ನು ಬಂಧಿಸಲಾಗಿದೆ. ಬಂಧನದ ವೇಳೆ ಹಲ್ಲೆಕೋರ ಗಾಯಗೊಂಡಿದ್ದರಿಂದ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೈಸ್ ದಾಳಿ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಕೆಲವು ದಿನಗಳ ಹಿಂದೆ ಶಾಲೆಯಲ್ಲಿ ಪ್ರೊಫೆಟ್ ಮೊಹಮ್ಮದ್ ಕುರಿತು ವ್ಯಂಗ್ಯ ಚಿತ್ರ ಚಿತ್ರಿಸಿದ್ದಕ್ಕೆ ಶಿಕ್ಷಕರೊಬ್ಬರ ಶಿರಚ್ಛೇದ ಮಾಡಲಾಗಿತ್ತು.
ಹಾಗೆಯೇ ಕಳೆದ ಕೆಲವು ಸಮಯದ ಹಿಂದೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೊನ್ ಕೂಡ ಪ್ರೊ.ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದು, ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದರು.