ಹೊಸದಿಗಂತ ಆನ್ ಲೈನ್ ಡೆಸ್ಕ್:
ವಾಲ್ಮಾರ್ಟ್ನ ಫ್ಲಿಪ್ಕಾರ್ಟ್ ಮತ್ತು ಸ್ಥಳೀಯ ಆಹಾರ ವಿತರಣಾ ನವೋದ್ಯಮವಾದ ಸ್ವಿಗ್ಗಿ ಕಚೇರಿಗಳಲ್ಲಿ ಮೂರನೇ ಮಾರಾಟಗಾರರಿಂದ ತೆರಿಗೆ ವಂಚನೆ ನಡೆದಿರುವ ಕುರಿತು ಆದಾಯ ತೆರಿಗೆ ಇಲಾಖೆಯು ಈ ವಾರ ಶೋಧ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ತೆರಿಗೆ ವಂಚನೆ ಕುರಿತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಸ್ವಿಗ್ಗಿ ಮತ್ತು ಇನ್ಸ್ಟಾಕಾರ್ಟ್ ಕಚೇರಿಗಳಲ್ಲಿ ಬುಧವಾರದಿಂದ ಶೋಧ ಕಾರ್ಯ ನಡೆಸಿದ್ದಾರೆ. ಇನ್ಸ್ಟಾಕಾರ್ಟ್ ಮತ್ತು ಫ್ಲಿಪ್ಕಾರ್ಟ್ ಕಚೇರಿಗಳಲ್ಲಿ ಶೋಧ ಕಾರ್ಯ ಗುರುವಾರ ಮುಕ್ತಾಯಗೊಂಡಿದ್ದು , ಕನಿಷ್ಠ 20 ಆದಾಯ ತೆರಿಗೆ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.