Thursday, July 7, 2022

Latest Posts

ಬಂಗಾಳದ ‘ಕರ್ಮ ಯೋಗಿ’ ಆಪ್ ನಿಂದ 8 ಸಾವಿರ ಐಟಿ ವೃತ್ತಿಪರರಿಗೆ ಉದ್ಯೋಗ ಭಾಗ್ಯ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಸೋಂಕಿನ ವೇಳೆಯಲ್ಲಿ ಇತರ ರಾಜ್ಯಗಳಿಂದ ಪಶ್ಚಿಮ ಬಂಗಾಳಕ್ಕೆ ಮರಳಿದ ಐಟಿ ವೃತ್ತಿಪರರು ಸುಮಾರು 8 ಸಾವಿರ ವೃತ್ತಿಪರರು ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ ಎಂದು ರಾಜ್ಯ ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ಮಾಹಿತಿ ತಂತ್ರಜ್ಞಾನ ವಿಭಾಗವು ಐಟಿ ವೃತ್ತಿಪರರಿಗಾಗಿ ನೂತನ ಕರ್ಮಯೋಗಿ ಆಪ್ ಪ್ರಾರಂಭಿಸಿದೆ. ಇದರಿಂದ ಬರೋಬ್ಬರಿ 8 ಸಾವಿರ ಮಂದಿ ಉದ್ಯೋಗಾವಕಾಶ ಪಡೆದಿದ್ದಾರೆ.

ಕೊರೋನಾ ವೇಳೆಯಲ್ಲಿ ಅನೇಕ ಐಟಿ ವೃತ್ತಿಪರರು ಬಂಗಾಳಕ್ಕೆ ಬಂದಿದ್ದಾರೆ. ಪ್ರತಿಯೊಬ್ಬರಲ್ಲಿರುವ ಪ್ರತಿಭೆಯನ್ನು ಅರಿಯಲು ಕರ್ಮ ಭೂಮಿ ಆಪ್ ಸಹಕಾರಿಯಾಗಲಿದೆ. ಸುಮಾರು 41,000 ವೃತ್ತಿಪರರು 400 ಉದ್ಯೋಗದಾತ ಸಂಸ್ಥೆಗಳೊಂದಿಗೆ ಸಂಪರ್ಕಗೊಂಡಿದ್ದಾರೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ಜಂಟಿ ಕಾರ್ಯದರ್ಶಿ ಸಂಜಯ್ ದಾಸ್ ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss