Thursday, August 11, 2022

Latest Posts

ಬಂಜಾರ ವಿದ್ಯಾರ್ಥಿಗಳಿಗೆ ತಾಲೂಕಿಗೊಂದು ವಸತಿ ಶಾಲೆ, ತಾಂಡಾ ಅಭಿವೃದ್ಧಿಗೆ 100 ಕೋಟಿ ಅನುದಾನ: ಸಚಿವ ಬೊಮ್ಮಾಯಿ

ಹಾವೇರಿ: ತಾಂಡಾ ಅಭಿವೃದ್ಧಿ ನಿಗಮಕ್ಕೆ ೧೦೦ ಕೋಟಿ ಅನುದಾನ ನೀಡಲಾಗಿದೆ. ಪ್ರತಿ ತಾಂಡಾಗಳಲ್ಲಿ ಸಿಮೆಂಟ್ ರಸ್ತೆ, ಸಮುದಾಯ ಭವನ ನಿರ್ಮಿಸುವ ಮೂಲಕ ಪರಿಣಾಮಕಾರಿ ಬದಲಾವಣೆ ಹಾಗೂ ಬೆಳವಣಿಗೆ ತರುವಲ್ಲಿ ತಾಂಡಾ ಅಭಿವೃದ್ಧಿ ನಿಗಮ ಪ್ರಮುಖಪತ್ರ ವಹಿಸಿದೆ ಎಂದು ಗೃಹ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ದೇವಗಿರಿ-ಯಲ್ಲಾಪೂರ ಬಳಿ ಇಂದು ಜಿಲ್ಲಾ ಬಂಜಾರ ಭವನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯವಂತ್ರಿ ಬಿ.ಎಸ್.ಯಡಿಯೂರಪ್ಪ ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಯಿತು. ತಾಂಡಾ ಜನರ ಜೀವನ ಗುಣಮಟ್ಟದ ಸುಧಾರಿಸಲು ಹಾಗೂ ಸರ್ಕಾರದ ಯೋಜನೆಗಳು ಈ ಸಮಾಜಕ್ಕೆ ಸಮರ್ಪಕವಾಗಿ ತಲುಪಿಸಲುವ ನಿಟ್ಟಿನಲ್ಲಿ ತಾಂಡಾ ಅಭಿವೃದ್ಧಿ ನಿಯಮ ಕಾರ್ಯಪ್ರವೃತ್ತವಾಗಿದೆ. ತಾಂಡಾ ಅಭಿವೃದ್ಧಿ ನಿಗಮದಿಂದ ಸಮಾಜ ಸಣ್ಣ ನೆಲೆ ಕಂಡುಕೊಂಡಿದೆ. ಆದರೆ ಬದುಕಿನ ಹೋರಾಟ ಮುಂದುವರೆದಿದೆ ಎಂದು ಹೇಳಿದರು.
ಬಂಜಾರ ಭವನ ಈ ಸಮಾಜದ ಸ್ವಾಭಿಮಾನದ ಸಂಕೇತವಾಗಿದೆ. ಭವನ ಕಟ್ಟಡವಲ್ಲ, ಸಮಾಜದ ಜಾಗೃತಿ, ಚಿಂತನೆ, ಹೊಸ ದಿಕ್ಸೂಚಿ ಸಂಕೇತವಾಗಿದೆ. ಉತ್ತಮ ಕಾರ್ಯಕ್ರಮಗಳ ಯೋಜನೆ ಮೂಲಕ ಮುಂದಿನ ದಿನಗಳಲ್ಲಿ ಸಾರ್ಥಕತೆ ಕಾಣಲಿ. ಈ ಸಮಾಜದ ಬಗ್ಗೆ ವಿಶೇಷ ಪ್ರತಿ, ವಿಶ್ವಾಸವಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇರುವ ಬಂಜಾರ ಸಮಾಜವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಮಾಜ ಭಾರತದ ಅಖಂಡತೆ ಹಾಗೂ ಏಕತೆ ಸಂಸ್ಕೃತಿ ಜೋಡಿಸುವ ಕೆಲಸ ಮಾಡುತ್ತಿದೆ ಎಂದರು.
ಸ್ಥಳೀಯ ಬಂಜಾರ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಬಂಜಾರ ಸಮುದಾಯ ಹೆಚ್ಚಿರುವ ಪ್ರತಿ ತಾಲೂಕಿನಲ್ಲಿ ೨೦ ರಿಂದ ೨೫ ಕೋಟಿ ವೆಚ್ಚದಲ್ಲಿ ವಸತಿ ಶಾಲೆಗಳನ್ನು ತೆರೆಯಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಹಾಗೂ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸುವ ಕಾರ್ಯ ಪ್ರಗತಿಯಲ್ಲಿದೆ. ಕೇಂದ್ರ ಸರ್ಕಾರದ ಸಾಮ್ಯತ್ವ ಯೋಜನೆ ಸೆಟಲೈಟ್ ಸರ್ವೇ ಮಾಡಲಾಗುವುದು. ತಾಂಡಾಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ ಎಂದು ಕರೆನೀಡಿದರು.
ಶಾಸಕ ನೆಹರು ಓಲೇಕಾರ ಮಾತನಾಡಿದರು, ಸಮಾರಂಭದಲ್ಲಿ ತಿಪ್ಪೇಶ್ವರಸ್ವಾಮೀಜಿ, ಕುಡಚಿ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ಶಾಸಕ ಅರುಣಕುಮಾರ ಗುತ್ತೂರ, ಜಿ.ಪಂ ಸದಸ್ಯರಾದ ವಿರುಪಾಕ್ಷಪ್ಪ ಕಡ್ಲಿ, ಲಕ್ಷ್ಮವ್ವ ಚವ್ಹಾಣ, ತಾ.ಪಂ.ಸದಸ್ಯ ಸತೀಶ್ ಸಂದಿಮನಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಜಿ.ಪಂ ಸಿಇಓ ರಮೇಶ ದೇಸಾಯಿ, ಜಾನಪದ ವಿವಿ ಕುಲಪತಿ ಡಿ.ವಿ.ನಾಯಕ್, ಮಾಜಿ ಸಚಿವರು ಹಾಗೂ ಸೂರಗೊಂಡನಕೊಪ್ಪ ಪ್ರತಿಷ್ಠಾನದ ಅಧ್ಯಕ್ಷ ರುದ್ರಪ್ಪ ಲಮಾಣಿ, ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಸವಿತಾಬಾಯಿ ಶಿವಕುಮಾರ್ ನಾಯ್ಕ ಇತರರು ಉಪಸ್ಥಿತರಿದ್ದರು. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಶಿವಶಂಕರ ನಾಯ್ಕ ಎಲ್ ಅವರು ಸ್ವಾಗತಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss