Thursday, July 7, 2022

Latest Posts

ಬಂಜಾರ ಸಮುದಾಯ ಭವನ ನಿರ್ಮಾಣಕ್ಕೆ ಎರಡು ಕೋಟಿ ರೂ. ಮಂಜೂರು

ಹೊಸ ದಿಗಂತ ವರದಿ, ಹುಣಸಗಿ (ಯಾದಗಿರಿ):

ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಬಂಜಾರ ಸಮುದಾಯ ಭವನ ನಿರ್ಮಾಣಕ್ಕೆ ಎರಡು ಕೋಟಿ ರೂ. ಗಳ ಅನುದಾನವನ್ನು ತಾಂಡಾ ಅಭಿವೃಧ್ಧಿ ಮಂಡಳಿ ಅದ್ಯಕ್ಷ ಹಾಗೂ ಶಾಸಕ ಪಿ.ರಾಜು ಅವರು ಶಾಸಕರ ಮನವಿಯ ಮೆರೆಗೆ ಮಂಜೂರು ಮಾಡಿದ್ದಾರೆ ಎಂದು ಬಂಜಾರ ಸಮುದಾಯದ ಯಾದಗಿರಿ ಜಿಲ್ಲಾದ್ಯಕ್ಷ ಬಾಸು ನಾಯಕ ಚವ್ಹಾಣ ಕೋಳಿಹಾಳ ತಿಳಿಸಿದ್ದಾರೆ.
ಅವರು ಹುಣಸಗಿಯಲ್ಲಿ ಮಾತನಾಡಿ, ಇತ್ತೀಚೆಗೆ ಸಂಸದ ಉಮೇಶ ಜಾಧವ ಹಾಗೂ ಶಾಸಕ ನರಸಿಮಃನಾಕ ಇವರ ನೆತೃತ್ವದಲ್ಲಿ ಬೆಂಗಳೂರಿಗೆ ತೆರಳಿ ತಾಂಡಾ ಅಭಿವೃಧ್ಧಿ ನಿಗಮದ ಅದ್ಯಕ್ಷರನ್ನು ಭೇಟಿ ಮಾಡಲಾಗಿತ್ತು. ತಾಲೂಕಿನಲ್ಲಿ ಐವತ್ತೆರಡುಕ್ಕೂ ಹೆಚ್ಚು ತಾಂಡಾ ಹಾಗೂ ಬಂಜಾರ ನಗರಗಳಿದ್ದು, ತಾಂಡಾಗಳಲ್ಲಿ ಸುಸಜ್ಜಿತ ಶಾಲೆ, ಕುಡಿಯುವ ನೀರು, ಸಿಸಿ ರೋಡ, ಸೇತುವೆ, ಎಸ್‌ಸಿಪಿ ಅಡಿಯಲ್ಲಿ ನೀರಾವರಿ ವಂಚಿತರಿಗೆ ನೀರಾವರಿ ಅನುಕೂಲವೇನೋ ಶಾಸಕರು ಮಾಡಿದ್ದಾರೆ. ಆದರೆ ತಾಲೂಕು ಕೇಂದ್ರದಲ್ಲಿ ಸಮುದಾಯ ಭವನದ ಕೊರತೆ ಇದ್ದು, ಇದನ್ನು ಕೂಡಾ ಮಜೂರಿ ಮಾಡಲು ಮನವಿ ಮಾಡಲಾಯಿತು. ಅದಕ್ಕೆ ಸ್ಪಂಧಿಸಿ ಮಂಜುರಾತಿ ನೀಡಿದ್ದಾರೆ ಎಂದು ಹೇಳಿದರು.
ತಾಂಡಾಗಳ ಜನತೆ ಗುಳೆ ಹೋಗಬಾರದು ಎನ್ನುವ ಕಾರಣಕ್ಕೆ ತಾಂಡಾಗಳಿರುವಲ್ಲಿ ಎತ ನೀರಾವರಿ ಯೋಜನೆ ಅನುಕೂಲ ಒದಗಿಸಿದ್ದಾರೆ. ಬೂದಿಹಾಳ ಏತ ನೀರಾವರಿ ಯೋಜನೆಯಲ್ಲಿ ಅತಿ ಚಿಕ್ಕ ಚಾಪಿತಾಂಡಾದ ಕೃಷಿ ಜಮೀನುಗಳನ್ನು ಕೂಡಾ ಸೇರಿಸಿ ಯೋಜನೆ ರೂಪಿಸಿದ್ದಾರೆ. ತಾಂಡಾ ಅಭಿವೃಧ್ಧಿ ನಿಗಮದ ಅದ್ಯಕ್ಷರು ಹಾಗೂ ಕುಡಚಿ ವಿಧಾನಸಭಾ ಸದಸ್ಯರು ಆಗಿರುವ ಪಿ. ರಾಜು ಅವರು ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಂಡಾ ಅಭಿವೃಧ್ಧಿ ನಿಗಮದಿಂದ ತಾಂಡಾಗಳಲ್ಲಿ ಶಿಕ್ಷಣ, ಕುಡಿಯುವ ನೀರು, ಆರೋಗ್ಯ, ಸ್ವಸಹಾಯ ಗುಂಪುಗಳ ರಚನೆಗೆ ಶಾಸಕರ ಸಹಕಾರ ಕೋರಿದರು.
ಶಾಸಕ ನರಸಿಂಹನಾಯಕ ಅವರು ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಹುಣಸಗಿ ಪಟ್ಟಣದಲ್ಲಿ ಲಭ್ಯವಿರುವ ಸರಕಾರಿ ಭೂಮಿಯಲ್ಲಿ ಎರಡು ಎಕರೆ ಭೂಮಿಯನ್ನು ಮಂಜೂರಿ ಮಾಡುವಂತೆ ಕೋರಿದ್ದಾರೆ.
ಇದೀಗ ಹುಣಸಗಿಯಲ್ಲಿ ಸಮುದಾಯ ಭವನ, ಬಂಜಾರ ಯುವಕರಿಗೆ ಸ್ವಯಂ ಉದ್ಯೋಗದಡಿಯಲ್ಲಿ ತರಬೇತಿ ಹಾಗೂ ಬ್ಯಾಂಕ ಸೌಲಭ್ಯ ನೀಡುವಲ್ಲಿ ತಾಂಡಾ ಅಭಿವೃಧ್ಧಿ ನಿಗಮದ ಅದ್ಯಕ್ಷರನ್ನು ಬಂಜಾರ ಸಮುದಾಯದೊಂದಿಗೆ ಶಾಸಕರು ಭೇಟಿ ಮಾಡಿ ಒತ್ತಾಯಿಸಿದ್ದಾರೆ ಎಂದು ಜಿಲ್ಲಾದ್ಯಕ್ಷ ಬಾಸುನಾಯಕ ಕೋಳಿಹಾಳ ಚವ್ಹಾಣ ತಿಳಿಸಿದ್ದಾರೆ.
ಸಂಸದ ಉಮೇಶ ಜಾಧವ, ನಿಂಗಾನಾಯಕ ಕಕ್ಕೇರಾ, ಶೇಖರ ನಾಯಕ ಮಾರನಾಳ, ಗುರು ರಾಠೋಡ, ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಲಕ್ಷö್ಮಣ ಚವ್ಹಾಣ, ಸುನೀಲ ಜಾಧವ ಬಿಜೆಪಿ ಮುಖಂಡ ಇತರರು ಶಾಸಕರೊಂದಿಗೆ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss