Sunday, July 3, 2022

Latest Posts

ಬಂಟ್ವಾಳದಲ್ಲಿ ಕೊರೋನಾಗೆ ಎರಡನೇ ಬಲಿ: ಸೀಲ್ ಡೌನ್ ಪ್ರದೇಶದಲ್ಲಿ ಬಂದೋಬಸ್ತ್ ಮತ್ತಷ್ಟು ಬಿಗು

ಬಂಟ್ವಾಳ: ಕೊರೋನಾ ಮಾಹಾಮಾರಿಗೆ ತಾಲೂಕಿನಲ್ಲಿ ಎರಡನೇ ಜೀವ ಬಲಿಯಾಗಿರುವ ಹಿನ್ನೆಲೆಯಲ್ಲಿ ಸೀಲ್ ಡೌನ್ ಪ್ರದೇಶದಲ್ಲಿ ಬಂದೋಬಸ್ತ್‌ನ್ನು ಮತ್ತಷ್ಟು ಬಿಗುಗೊಳಿಸಲಾಗಿದೆ.
ಬ್ಯಾರೀಕ್ಯಾಡ್ ಹಾಕಿ ಬಂದ್
ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದ ಕಲ್ಯಾಣ ಮಂಟಪದ ರಸ್ತೆ, ಮಠದ ಓಣಿ, ಶಾಲಾ ರಸ್ತೆ ವೈದ್ಯನಾಥ ರಸ್ತೆಗೆ ಬುಧವಾರ ರಾತ್ರಿ ಬ್ಯಾರೀಕ್ಯಾಡ್ ಹಾಕಿ ಬಂದ್ ಮಾಡಲಾಗಿದೆ. ಸಾರ್ವಜನಿಕ ಆಸ್ಪತ್ರೆಯ ಮೂಲಕ ಮಾರ್ಕೆಟ್ ರಸ್ತೆಗೆ ಬರಲು ಯತ್ನಿಸಿದ ಯುವಕರಿಗೆ ಸ್ಥಳದಲ್ಲಿದ್ದ ಪೋಲಿಸರು ಲಾಠಿ ಬೀಸಿ ಕಳುಹಿಸಿದ ಪ್ರಸಂಗವು ನಡೆದಿದೆ. ಕಂಟೈನ್ಮಂಟ್ ವಲಯದ ಮನೆಮಂದಿಗೆ ಪುರಸಭೆಯಿಂದ ಹಾಲು ಪೂರೈಕೆ ಯಾಗಿದ್ದು, ಹಿ.ಯು.ಸೇ. ಪ್ರಮುಖ ಶಿವಪ್ರಸಾದ್ ಅವರು ಸ್ಥಳೀಯ ಔಷಧಿ ಅಂಗಡಿಯಿಂದ ಔಷಧಿ ಖರೀದಿಸಿ ಕೆಲ ಮನೆಗಳಿಗೆ ಪೂರೈಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss