ಬಂಟ್ವಾಳ: ಪೇಟೆಯ ಮಧ್ಯಭಾಗದಲ್ಲಿರುವ ಅಕ್ಕಪಕ್ಕದ ಎರಡು ಮನೆಯ ಪೈಕಿ ಒಂದು ಮನೆಯಲ್ಲಿ ಕೊರೋನ ಸೋಂಕಿನಿಂದ ಸೊಸೆ, ಅತ್ತೆ ಸಾವನ್ನಪ್ಪಿದರೆ, ಇನ್ನೊಂದು ಮನೆಯಲ್ಲಿ ತಾಯಿ, ಮಗಳಿಗೆ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಕಂಟೈನ್ಮಂಟ್ ವಲಯದ ಭಂಡಾರಿಹಿತ್ಲು, ಮುಖ್ಯರಸ್ತೆಯಲ್ಲಿರು
ಮಠದ ಓಣಿಯಲ್ಲಿರುವ ಸಭಾಭವನದಲ್ಲಿ ಈ ಪ್ರಕ್ರಿಯೆ ನಡೆದಿದೆ. ಇಲ್ಲಿಗೆ ಅಂಬ್ಯುಲೆನ್ಸ್ ನಲ್ಲಿ ನಾಗರಿಕರನ್ನು ಕರೆತಂದು ಎರಡು ಪ್ರತ್ಯೇಕ ವಿಭಾಗವನ್ನಾಗಿಸಿ ಮಾದರಿ ಸಂಗ್ರಹಿಸಲಾಗಿದೆ.
150ಕ್ಕು ಅಧಿಕ ಮನೆ
ಬಂಟ್ವಾಳ ಪೇಟೆಯ ಕಂಟೈನ್ಮಂಟ್ ವಲಯದಲ್ಲಿ ಸುಮಾರು 150 ಕ್ಕೆ ಅಧಿಕ ಮನೆಗಳಿದ್ದು,ತಾಲೂಕಾಡಳಿತ ಕೇವಲ ೯೩ ಮನೆಗಳನ್ನಷ್ಠೆ ಗುರುತಿಸಿದೆ.ಆಶಾ ಕಾರ್ಯಕರ್ತೆಯರು ಮನೆ,ಮನೆ ಸಂಪರ್ಕಿಸಿ ಮಾಹಿತಿ ಸಂಗ್ರಹಿಸುವ ವೇಳೆ ೧೫೦ ಕ್ಕು ಅಧಿಕ ಮನೆಗಳಿರುವ ಬಗ್ಗೆ ಕಂಡುಬಂದಿದೆ.ಮಂಗಳವಾರ ಉಳಿದವರ ಮಾದರಿ ಸಂಗ್ರಹಿಸುವ ನಿರೀಕ್ಷೆ ಇದೆ.