ಬಂಟ್ವಾಳ: ತಾಲೂಕಿನ ಅಮ್ಮುಂಜೆ ಗ್ರಾಮದ ಮಾದುಕೋಡಿಯಲ್ಲಿ ಗೋಡೆಯ ಇಟ್ಟಿಗೆ ಕುಸಿದು ಬಿದ್ದು ಓರ್ವ ವ್ಯಕ್ತಿಯೊಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ರವಿವಾರ ನಡೆದಿದೆ.
ಶಂಭೂರುಗ್ರಾಮದ ಗುಡ್ಡೆಮನೆ ನಿವಾಸಿ ಜನಾರ್ದನ ಅಂಚನ್(38) ಮೃತಪಟ್ಟವರಾಗಿದ್ದಾರೆ. ಬಾಲಕ ವೃಷಭ(11) ಹಾಗೂ ಸೂರಜ್ (20) ಎಂಬವರು ಗಾಯಗೊಂಡವರಾಗಿದ್ದಾರೆ. ರವಿವಾರ ರಜಾದಿನವಾಗಿದ್ದರಿಂದ ಮಾದುಕೋಡಿಯಲ್ಲಿ ನಡೆಯುತ್ತಿದ್ದ ಶ್ರಮದಾನದ ವೇಳೆ ಕಟ್ಟಡದ ಕಲ್ಲು ಕುಸಿದು ಜನಾರ್ದನ ಅವರ ಮೈಮೇಲೆ ಬಿದ್ದಿದ್ದು,ತಕ್ಷಣ ಗಾಯಾಳುಗಳನ್ನು ಆಸ್ಪತೆ್ರಗೆ ಸಾಗಿಸಲಾಗಿದ್ದು,ಜನಾರ್ದನ ಅವರು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿದ ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್, ಸಿಬ್ಬಂದಿ ರೂಪೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಜರು ಮಾಡಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.