ಬಂಟ್ವಾಳ: ಬಿಜೆಪಿ ವತಿಯಿಂದ ಭಾನುವಾರ ನಡೆದ ಜನಸಂವಾದ rallyಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾರವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸಲು ಬಿಜೆಪಿ ಗೋಳ್ತಮಜಲು ಮಹಾಶಕ್ತಿಕೇಂದ್ರ ವತಿಯಿಂದ ನರಿಕೊಂಬು ಗ್ರಾಮದ ಶ್ರೀ ವೀರಮಾರುತಿ ಮಂದಿರದ ಸಭಾಭವನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಅಂತರ ಕಾಪಾಡಿಕೊಂಡು ಭಾಗವಹಿಸಿದರು.
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ,ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಉಪಾಧ್ಯಕ್ಷ ವಜ್ರನಾಥ ಕಲ್ಲಡ್ಕ, ನರಿಕೊಂಬು ಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೆಟ್ಟು,ಮಾಜಿ ತಾ.ಪಂ ಉಪಾಧ್ಯಕ್ಷರಾದ ದಿನೇಶ್ ಅಮ್ಟೂರು,ಹಿ.ವರ್ಗ ಮೋರ್ಚಾ ಅಧ್ಯಕ್ಷರಾದ ಆನಂದ ಎ. ಶಂಭೂರು, ರಮಾನಾಥ ರಾಯಿ, ಸುರೇಶ್ ಕೋಟ್ಯಾನ್,ಬೂಬ ಸಾಲ್ಯಾನ್,ಜಯರಾಜ್ ಶಂಭೂರು,ಚಂದ್ರಹಾಸ,ಪದ್ಮನಾಭ ಕರ್ಬೆಟ್ಟು,ರಂಜಿತ್ ಮಾಣಿಮಜಲು,ಸಂತೋಷ್ ನರಿಕೊಂಬು,ರಂಜಿತ್ ಕೆದ್ದೇಲ್,ಕೃಷ್ಣಾನಂದ ಮಾಣಿಮಜಲು,ಕಿಶೋರ್ ಶೆಟ್ಟಿ,ವಸಂತ ಭೀಮಗದ್ದೆ,ಪ್ರೇಮನಾಥ ಶೆಟ್ಟಿ ,ಶಶಿಧರ ಎನ್,ನಾರಾಯಣ ದರ್ಖಾಸ್,ಶಿವರಾಜ್ ಬಾಳ್ತಿಲ ಮತ್ತು ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.