Monday, August 8, 2022

Latest Posts

ಬಂಟ್ವಾಳದ 4 ಮಂದಿ ಬೋಳೂರಿನ ಒಬ್ಬರು ಸೋಂಕು ಮುಕ್ತ: ಕೊರೋನಾ ಮುಕ್ತ ಐದು ಮಂದಿ ಬಿಡುಗಡೆ

ಮಂಗಳೂರು: ಒಂದೆಡೆ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದರೆ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಾಗಿದ್ದು ಜಿಲ್ಲೆಯ ಜನತೆಯಲ್ಲಿ ಸ್ವಲ್ಪ ಮಟ್ಟಿಗೆ ಸಮಾದಾನ ತಂದಿದೆ.

ಶನಿವಾರ ಕೊರೋನಾ ಮುಕ್ತರಾಗಿ ಐದು ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೊರೊನಾ ಮುಕ್ತವಾಗಿ ಬಿಡುಗಡೆಗೊಂಡ 4 ಮಂದಿ ಬಂಟ್ವಾಳದ ಕಸಬಾ ಹಾಗೂ ಒಬ್ಬರು ಮಂಗಳೂರಿನ ಬೋಳೂರು ನಿವಾಸಿಯಾಗಿದ್ದಾರೆ.

ಜಿಲ್ಲೆಯಲ್ಲಿ ಅತೀ ದೊಡ್ಡ ಕೊರೋನಾ ಹಾಟ್ ಸ್ಪಾಟ್ ಆಗಿ ಬದಲಾಗಿದ್ದ ಬಂಟ್ವಾಳದ 4 ಮಂದಿಯೂ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಈ ಮೂಲಕ ಬಂಟ್ವಾಳ ತಾಲೂಕು ಕೊರೋನಾ ಮುಕ್ತವಾದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss